– ತಮ್ಮ ಸರ್ಕಾರದ ಅಂಕಿ ಅಂಶಗಳನ್ನ ತೋರಿಸಲ್ಲ
ಕೋಲ್ಕತ್ತಾ: ಕೇಂದ್ರ ಗೃಹ ಮಂತ್ರಿ ಅವರಿಗೆ ಸುಳ್ಳು ಹೇಳುವುದು ಶೋಭೆ ತರಲ್ಲ ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿಗೆ ಗುದ್ದು ನೀಡಿದ್ದಾರೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡಸಿದರು.
ಗೃಹ ಮಂತ್ರಿಗಳಾದವರು ಸರಿಯಾದ ಅಂಕಿ ಅಂಶಗಳನ್ನಿಟ್ಟುಕೊಂಡು ಮಾತನಾಡಬೇಕು. ಶಾ ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಅಂಕಿ ಅಂಶಗಳನ್ನ ನೋಡಿಲ್ಲ. ರಾಜ್ಯದಲ್ಲಿ ನಡೆಯುವ ಆತ್ಮಹತ್ಯೆಗಳನ್ನ ಕೊಲೆ ಎಂದು ಬಿಂಬಿಸಿ ಸುಳ್ಳು ಸುದ್ದಿ ಬಿತ್ತರಿಸುವ ಕೆಲಸವನ್ನ ಬಿಜೆಪಿ ಮಾಡ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಬಡತನ ನಿರ್ಮೂಲನೆಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶಿಶು ಮೃತ್ಯು ದರ ಸಹ ಕಡಿಮೆ ಇದೆ. ರೇಪ್, ಕೊಲೆ, ನಕ್ಸಲ್ ಚಟುವಟಿಕೆಗಳ ಸಂಖ್ಯೆಯೂ ಇಳಿಮುಖವಾಗಿದೆ. ರಾಜಕೀಯ ಗಲಾಟೆಗಳಿಂದ ಹಿಂಸೆ ಪ್ರಕರಣಗಳು ಇಳಿಕೆಯಾಗಿವೆ ಎಂದು ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ರು.
ಟಿಎಂಸಿ ಸರ್ಕಾರ ರಾಜ್ಯದಲ್ಲಿ ಅತಿಹೆಚ್ಚು ಮೆಡಿಕಲ್ ಕಾಲೇಜುಗಳನ್ನ ಆರಂಭಿಸಿದೆ. ಬಂಗಾಳದಲ್ಲಿ 272 ಐಟಿಐಗಳಿವೆ. ಪಶ್ಚಿಮ ಬಂಗಾಳದ ಸಾಕ್ಷರತೆತಯೂ ಪ್ರಮಾಣವೂ ಹೆಚ್ಚಿದ್ದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ರು.