– ಹಾನಗಲ್ ಶಾಸಕ ಸಿಎಂ ಉದಾಸಿ ನಿಧನ
– ಹಾವೇರಿ ಜಿಲ್ಲೆ ರಚನೆಯಲ್ಲಿ ಪ್ರಮುಖ ಪಾತ್ರ
ಬೆಂಗಳೂರು: ಬಿಜೆಪಿ ಹಿರಿಯ ಶಾಸಕ, ಮಾಜಿ ಸಚಿವ ಸಿ.ಎಂ.ಉದಾಸಿ ಇವತ್ತು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವತ್ತು ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ. 84 ವರ್ಷದ ಉದಾಸಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
Advertisement
ಅಣ್ಣಾವ್ರು ಎಂದೇ ಖ್ಯಾತರಾದ ಮಾಜಿ ಸಚಿವರು, ಶಾಸಕ ಸಿ.ಎಂ.ಉದಾಸಿ ಅವರು ತಮ್ಮ ಸುದೀರ್ಘ ರಾಜಕಾರಣದಲ್ಲಿ ಹಾಲವಾರು ಏಳು ಬೀಳುಗಳನ್ನು ಕಂಡವರು. ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದ ಅವರು ರಾಜ್ಯದ ರಸ್ತೆಗಳಿಗೆ ಹೊಸ ಕಾಯಕಲ್ಪ ನೀಡಿದವರು. ರಸ್ತೆಗಳು ಅಭಿವೃದ್ಧಿ ಆದರೆ ರಾಜ್ಯ ಅಭಿವೃದ್ಧಿಯಾದಂತೆ ಎಂಬ ತತ್ವದಡಿ ಕಾರ್ಯ ನಿರ್ವಹಿಸಿದ್ದ ಅವರು ಗ್ರಾಮೀಣಾಭಿವೃದ್ಧಿಯ ರೂವಾರಿ, ಜಿಲ್ಲೆಯ ಹಿರಿಯ ರಾಜಕಾರಣಿ, ರೈತರ ಕಣ್ಮಣಿ ಹಾಗೂ ಹಾನಗಲ್ ತಾಲೂಕಿನ ಅಭಿವೃದ್ಧಿಯ ಹರಿಕಾರರು ಹೌದು.
Advertisement
Advertisement
ರಾಜಕೀಯ ಜೀವನದಲ್ಲಿ ರಾಜಕೀಯ ಗುರು ಇಲ್ಲದೇ ಸತತ ಹೋರಾಟ ಹಾಗೂ ನಾಯಕತ್ವದ ಗುಣಗಳಿಂದ ಪರಸಭಾ ಸದಸ್ಯರಾಗಿ, ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿ ರಾಜ್ಯಾದ್ಯಂತ ಹೆಸರು ಮಾಡಿದ ಸಿ.ಎಂ.ಉದಾಸಿ ಅವರದು ಒಂದು ವಿಶಿಷ್ಟ ವ್ಯಕ್ತಿತ್ವ.
Advertisement
ಶರಣ ಸಾವಿತ್ರಮ್ಮಮಹಾಲಿಂಗಪ್ಪನವರ ಪುತ್ರರಾಗಿ ಫೆ 2. 1937ರಲ್ಲಿ ಜನಿಸಿದ ಚನ್ನಬಸಪ್ಪ ಉದಾಸಿ ಅವರು ಹಾನಗಲ್ಲ ತಾಲೂಕಿನಲ್ಲಿ ವಿದ್ಯಾಭ್ಯಾಸ ಆರಂಭಿಸಿ ಆರ್ಥಿಕ ತೊಂದರೆಯಿಂದ ಹಾವೇರಿಗೆ ತೆರಳಿ ಹಾವೇರಿಯಲ್ಲಿ ವಾರದ ಮನೆಯ ಊಟ ಮಾಡಿ, ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಡತನದಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾದರು. ಮುಂದೆ ವ್ಯಾಪಾರ ಮತ್ತು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಈ ಎರಡೂ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಮಾಡಿದರು. ಇದನ್ನೂ ಓದಿ: ಸಿಎಂ ಉದಾಸಿ ನಿಧನಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ
ಅವರ ಆತ್ಮಕ್ಕೆ ದೇವರು ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರು, ಬಂಧುಗಳು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೋರುತ್ತಾ, ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಓಂ ಶಾಂತಿ (2/2)
— B.S.Yediyurappa (@BSYBJP) June 8, 2021
ವಿದ್ಯಾಭ್ಯಾಸ ಮೊಟಕುಗೊಳಿಸಿ ವ್ಯಾಪಾರ ವೃತ್ತಿ ಆರಂಭಿಸಿದ ಇವರು ಹಗಲಿರುಳು ವ್ಯಾಪಾರ ತೊಡಗಿದ್ದ ಉದಾಸಿಯವರಿಗೆ ರಾಜಕೀಯ ಮಾತ್ರ ದೂರ ಉಳಿದಿತ್ತು. ಆದರೆ 1974ರಲ್ಲಿ ಹಿರಿಯರ ಒತ್ತಾಸೆಗೆ ಮಣಿದು ಪುರಸಭೆಗೆ ಸ್ಪರ್ಧಿಸಿ ಪ್ರಥಮ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಪುನಃ 1980ರಲ್ಲಿ ಅಧ್ಯಕ್ಷ ಅವಧಿ ಮುಗಿದ ನಂತರ ವ್ಯಾಪಾರದಲ್ಲಿ ಮುಂದುವರೆದ ಇವರಿಗೆ ತಾಲೂಕಿನ ರೈತರು, ಹಾಗೂ ರಾಜಕೀಯ ಮುಖಂಡರು ಬೆನ್ನು ಬಿಡದೇ ಒತ್ತಾಯ ಮಾಡಿದ್ದರಿಂದಾಗಿ 1983ರಲ್ಲಿ ಪಕ್ಷೇತರರ ಅಭ್ಯರ್ಥಿಯಾಗಿ ಹಾನಗಲ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದರು. ನಂತರ ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ಉದಾಸಿಯವರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ನಿಗಮವನ್ನು ಲಾಭದಲ್ಲಿ ತಂದರು. 1985ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು.
ಮಾಜಿ ಸಚಿವರೂ ಹಾನಗಲ್ ಹಾಲಿ ಶಾಸಕರು ರಾಜಕೀಯ ಮುತ್ಸದ್ದಿಯಾಗಿದ್ದ ಸಿ ಎಮ್ ಉದಾಸಿಯವರು ಇಂದು ನಮ್ಮನ್ನೆಲ್ಲ ಅಗಲಿದ ಸುದ್ದಿ ತಿಳಿದು ತೀವ್ರ ದುಃಖವಾಯ್ತು.
ಅವರ ಕುಟುಂಬ, ಅಭಿಮಾನಿ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.#PMOIndia #BJP4India #BJP4Karnatak #CMofKarnataka#COVIDSecondWave pic.twitter.com/LbMR3pbAU6
— K S Eshwarappa (@ikseshwarappa) June 8, 2021
ಸಚಿವರಾದ ನಂತರ ಶಿಕ್ಷಣ ಕ್ಷೇತ್ರಕ್ಕೆ ಸೇರಿದಂತೆ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಅವರು, ತಾಲೂಕಿನಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜ್, ಮೊರಾರ್ಜಿ ವಸತಿ ಶಾಲೆ, ಪಾಲಿಟೆಕ್ನಿಕ್, ಪದವಿ ಕಾಲೇಜ್ ಹೀಗೆ ಹಲವಾರು ಕಾಲೇಜುಗಳನ್ನು ಆರಂಭಿಸುವ ಮೂಲಕ ಶಿಕ್ಷಣ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಉದಾಸಿಯವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಹಿಂದುಳಿದ ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಹಿರಿಯ ಮುಖಂಡರು, ಮಾಜಿ ಸಚಿವರು, ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಎಂ.ಉದಾಸಿ ಅವರ ನಿಧನದ ಸುದ್ದಿ ತೀವ್ರ ನೋವುಂಟು ಮಾಡಿದೆ. ಹಾವೇರಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ತರಲು ಅಪಾರ ಪರಿಶ್ರಮ ಪಟ್ಟಿದ್ದ ಉದಾಸಿ ಅವರಿಗೆ, ಈ ಇಳಿ ವಯಸ್ಸಿನಲ್ಲೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇದ್ದ ಉತ್ಸಾಹ, ಕಳಕಳಿ ಅನುಕರಣೀಯ.
1/2 pic.twitter.com/KyYdCzhz5T
— Dr Sudhakar K (@mla_sudhakar) June 8, 2021
ಉದಾಸಿಯವರು ರೈತರ, ತಾಲೂಕಿನ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ತಾಲೂಕಿನ ಅಭಿವೃದ್ಧಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಪ್ರತಿವರ್ಷ ಬೆಳೆಸಾಲ, ಬೆಳೆವಿಮಾ ಪರಿಹಾರ ಒದಗಿಸಿಕೊಡುವಲ್ಲಿ ವಿಶೇಷ ಕಾಳಜಿ ವಹಿಸಿದರು. ನಂತರದ 1989ರ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅವಿಭವಿಸಿದರೂ ಅಂಜದೇ ತಮ್ಮ ಜನಪರ ಕಾರ್ಯ ಶ್ರಮಿಸುತ್ತಿದ್ದಾರೆ ಗಳನ್ನು ಮುಂದುವರೆಸಿದರು. ನಂತರ 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದಿಂದ ಚುನಾಯಿತರಾಗಿ ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡರು. ಈ ಅವಧಿಯಲ್ಲಿಯೇ ತಾಲೂಕಿನ ಅನೇಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರು. ನಂತರ 1999ರ ಚುನಾವಣೆಯಲ್ಲಿ ಸೋಲುಂಡ ಅವರು, ಬದಲಾದ ರಾಜಕೀಯ ಸ್ಥಿತಿಗತಿಯಲ್ಲಿ ಜನತಾದಳ ತೊರೆದು, ಭಾರತೀಯ ಜನತಾ ಪಕ್ಷ ಸೇರಿ ಜಿಲ್ಲೆಯಲ್ಲಿರುವ ತಮ್ಮ ಬೆಂಬಲಿಗರನ್ನು ಕೂಡಾ ಭಾರತೀಯ ಜನತಾ ಪಕ್ಷಕ್ಕೆ ಕರೆತಂದು, 2004ರ ಚುನಾವಣೆಯಲ್ಲಿ ತಾವೂ ಆಯ್ಕೆಯಾಗುವ ಮೂಲಕ ತಮ್ಮ ಬೆಂಬಲಿಗ ಯುವ ನಾಯಕರಾದ ಶಿವರಾಜ ಸಜ್ಜನರ, ನೆಹರೂ ಓಲೇಕಾರ, ಜಿ.ಶಿವಣ್ಣ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್ ಕೊಡಿಸಿ ಶಾಸಕರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಹಾನಗಲ್ ಕ್ಷೇತ್ರದ ಶಾಸಕರು, ಮಾಜಿ ಸಚಿವರು ನನ್ನ ಮಾರ್ಗದರ್ಶಕರಾಗಿದ್ದ ಶ್ರೀ ಸಿ.ಎಮ್. ಉದಾಸಿ ಅವರು ನಿಧನರಾದ ಸುದ್ದಿಯಿಂದ ಅತ್ಯಂತ ದುಃಖಿತನಾಗಿದ್ದೇನೆ.
ನಾಡು ಒಬ್ಬ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/dB4wtYZiEn
— Basavaraj S Bommai (@BSBommai) June 8, 2021
ನಂತರ ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದರು. ನಂತರ 2008ರ ಚುನಾವಣೆಯಲ್ಲಿಯು ಸಹ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ 5 ಬಿಜೆಪಿ ಶಾಸಕರು ಆಯ್ಕೆ ಯಾಗಲು ಶ್ರಮಿಸಿದರು.
2013ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದರು. ಇವರ ಹಾಗೂ ಇವರ ಎದುರಾಳಿ ಮನೋಹರ ತಹಶೀಲ್ದಾರ ನಡುವೆ ಸೋಲು-ಗೆಲುವಿನ ಜುಗಲ್ ಬಂದಿ ನಡೆದುಕೊಂಡು ಬಂದಿತ್ತು. 2018 ವಿಧಾನಸಭಾ ಚುನಾವಣೆಯಲ್ಲಿ ಉದಾಸಿ ಅವರು ಎದರಾಳಿ ಬದಲಾಗಿದ್ದರು. ಶ್ರೀನಿವಾಸ ಮಾನೆ ಅವರು ಸಿ.ಎಂ.ಉದಾಸಿ ಅವರ ಎದುರಾಳಿಯಾಗಿ ತೀವೃ ಪೈಪೋಟಿ ಡಿದ್ದರು. ಕೊನೆಯ ಕ್ಷಣದಲ್ಲಿ ಸಿ.ಎಂ.ಉದಾಸಿ ಅವರು ಗೆಲವು ದಾಖಲಿಸಿದ್ದರು. ಸಿ.ಎಂ.ಉದಾಸಿ ಅವರ ಪುತ್ರ ಶಿವಕುಮಾರ ಉದಾಸಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲವು ದಾಖಲಿಸುವ ಮೂಲಕ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡರು, ಹಾನಗಲ್ ಶಾಸಕರಾದ ಶ್ರೀ ಸಿಎಂ ಉದಾಸಿ ಅವರ ನಿಧನದ ವಿಚಾರ ತಿಳಿದು ಅತೀವ ದುಃಖವಾಗಿದೆ. ಅವರ ಅಗಲಿಕೆ ರಾಜ್ಯ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.#ಓಂಶಾಂತಿ pic.twitter.com/dH6Db03hZR
— Nalinkumar Kateel (@nalinkateel) June 8, 2021
ಹಾವೇರಿ ಜಿಲ್ಲೆಯ ರಚನೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಉದಾಸಿ ಅವರು ಹಾಗೂ ಪರಿಸರ ಮತ್ತು ಬಂಧಿಖಾನೆ ಸಚಿವರಾಗಿದ್ದ ಬಸವರಾಜ ಶಿವಣ್ಣನವರ ಇಬ್ಬರು ಸೇರಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಹಾವೇರಿ ಜಿಲ್ಲೆ ಘೋಷಿಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿದೆ. ಸಿ.ಎಂ. ಉದಾಸಿ ಅವರು ಜಿಲ್ಲೆಯ ಹಾಗೂ ಹಾನಗಲ್ಲ ತಾಲೂಕಿನ ಜನತೆಯ ನೆಚ್ಚಿನ ನಾಯಕರಾಗಿ, ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಸದಾ ಕ್ರಿಯಾಶೀಲರಾಗಿದ್ದ ಉದಾಸಿ ಇತ್ತೀಚಿನ ದಿನಗಳಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.