ಮಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಮಂಗಳೂರು ಹೊರವಲಯದ ಗುರುಪುರ ಬಳಿ ಗುಡ್ಡ ಕುಸಿತವಾಗಿದೆ.
ಗುಡ್ಡದ ಪಕ್ಕದಲ್ಲಿರೋ ನಾಲ್ಕು ಮನೆಗಳು ಮಣ್ಣಿನಡಿ ಸಿಲುಕಿರೋ ಮಾಹಿತಿ ಲಭ್ಯವಾಗಿದೆ. ಮಣ್ಣಿನಡಿಯಲ್ಲಿ 16 ವರ್ಷದ ಮತ್ತು 6 ವರ್ಷದ ಬಾಲಕರಿಬ್ಬರು ಸಿಲುಕಿದ್ದು, ಇಬ್ಬರನ್ನು ಹೊರ ತೆಗೆಯುವ ಕೆಲಸ ನಡೆಯುತ್ತಿದೆ. ಸ್ಥಳಕ್ಕೆ 25 ಜನರ ಎನ್‍ಡಿಆರ್‍ಎಫ್ ತಂಡ ಆಗಮಿಸಿದ್ದು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಗುಡ್ಡದ ಕೆಳ ಭಾಗಗಳಲ್ಲಿ ಕೆಲವು ಮನೆಗಳು ಅಪಾಯದ ಅಂಚಿನಲ್ಲಿವೆ. ಸ್ಥಳಕ್ಕೆ ಅಧಿಕಾರಿಗಳು ಅಪಾಯದ ಅಂಚಿನಲ್ಲಿ ಸಿಲುಕಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರೋದರಿಂದ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು.