-ಪ್ರಸಾದ ಸೇವನೆಗೆ ಬಂದ ಕರಡಿಗಳ ಹಿಂಡು
ಬಳ್ಳಾರಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ಊರ ಮುಂದಿನ ದೇವಸ್ಥಾನದಲ್ಲಿ ಕರಡಿಗಳ ಹಿಂಡು ಪ್ರತ್ಯಕ್ಷವಾಗಿದೆ. ಇದರಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಗುಡೇಕೋಟೆ ಗ್ರಾಮದ ಹತ್ತಿರವಿರುವ ಪಂಚಲಿಂಗೇಶ್ವರ ದೇವಾಸ್ಥಾನದ ಹತ್ತಿರ ಇಂದು ಸಂಜೆ 7 ಗಂಟೆ ಸುಮಾರಿಗೆ ಕರಡಿಗಳ ಗುಂಪೊಂದು ಪ್ರತ್ಯಕ್ಷವಾಗಿದೆ. ಒಂದು ಕಡೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರ ಓಡಾಟ ವಿರಳವಾಗಿದೆ. ಹೀಗಾಗಿ ಆಹಾರ ಅರಸಿಕೊಂಡು ಬಂದ ಕರಡಿಗಳ ಹಿಂಡು ದೇವಸ್ಥಾನದಲ್ಲಿ ಇರಿಸಲಾಗಿದ್ದ ದೇವರ ಮುಂದಿನ ನೈವೇದ್ಯ ತಿನ್ನಲು ಬಂದಿದೆ. ದೇವಸ್ಥಾನದ ಪೂಜಾರಿ ತಮ್ಮ ಮೊಬೈಲ್ ನಲ್ಲಿ ಕರಡಿಗಳ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಇದನ್ನು ಓದಿ: ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊರೊನಾಗೆ ಬಲಿ
Advertisement
Advertisement
ಗುಡೇಕೋಟೆ ಭಾಗದಲ್ಲಿ ಹೆಚ್ಚಿನ ಕರಡಿಗಳಿದ್ದು, ಜನರ ಓಡಾಟ ವಿರಳವಾದ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನಲ್ಲಿ ಕರಡಿಗಳ ಓಡಾಟ ಹೆಚ್ಚಾಗಿದೆ.
Advertisement
ಲಾಕ್‍ಡೌನ್ ನಿಂದಾಗಿ ಮಾನವನ ಪರಿಸರದ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ. ಹೀಗಿರುವಾಗ ಇತ್ತೀಚೆಗಷ್ಟೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರಾವಳಿ ಭಾಗದಲ್ಲಿ ಆಮೆಗಳು ಸಮುದ್ರ ತೀರಕ್ಕೆ ಬಂದು ಮಾನವನ ಭಯವಿಲ್ಲದೇ ಮೊಟ್ಟೆ ಇಟ್ಟು ಮರಿ ಮಾಡಲು ಆರಂಭಿಸಿದ್ದು, ಹೊನ್ನಾವರದ ಕಾಸರಗೋಡು, ಟೊಂಕ ಸೇರಿದಂತೆ ತೀರ ಪ್ರದೇಶದಲ್ಲಿ ಓಲಿವ್ ರಿಡ್ಲಿ ಎಂಬ ಜಾತಿಯ ಅಳಿವಿನಂಚಿನ ಆಮೆಗಳು ಫೆಬ್ರವರಿಯಿಂದ ಈವರೆಗೆ ಸಾವಿರಾರು ಮೊಟ್ಟೆಗಳನ್ನು ಇಟ್ಟಿದೆ. ಇದನ್ನು ಓದಿ:ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್‍ಟಾಪ್ ತೋರಿಸಿದ್ದಾರೆ: ಡಿಕೆಶಿ