ಮುಂಬೈ: ಸ್ಟಾರ್ ದಂಪತಿಯಾದ ಕರೀನಾ-ಸೈಫ್ ಅಲಿ ಖಾನ್ ತಮ್ಮ ಎರಡನೇ ಪುತ್ರನಿಗೆ ಈಗಾಗಲೇ ನಾಮಕರಣ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಫೆಬ್ರವರಿ 21ರಂದು ಕರೀನಾ ತಮ್ಮ ಎರಡನೇ ಪುತ್ರನಿಗೆ ಜನ್ಮ ನೀಡಿದ್ದರು. ಆದರೆ ಈವರೆಗೂ ಒಂದು ಬಾರಿಯೂ ಕರೀನಾ ತಮ್ಮ ಮಗುವಿನ ಮುಖವನ್ನು ಅಭಿಮಾನಿಗಳಿಗೆ ತೋರಿಸಿರಲಿಲ್ಲ. ಮಗುವಿನ ಹೆಸರು ಕೂಡ ಬಹಿರಂಗ ಆಗಿರಲಿಲ್ಲ. ಆದರೆ ಈಗ ಕರೀನಾ-ಸೈಫ್ ಅಲಿ ಖಾನ್ ತಮ್ಮ ಎರಡನೇ ಪುತ್ರನಿಗೆ `ಜೇ’ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಕರೀನಾ-ಸೈಫ್ ಅಲಿ ಖಾನ್ ತಮ್ಮ ಎರಡನೇ ಪುತ್ರನಿಗೆ `ಜೇ’ ಎಂದು ಹೆಸರಿಟ್ಟಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಕರೀನಾ ಅಥವಾ ಸೈಫ್ ಅಲಿ ಖಾನ್ ಯಾರೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು `ಜೇ’ ಪದದ ಅರ್ಥವೇನು ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿ `ಜೇ’ ಎಂಬ ಪದಕ್ಕೆ ನೀಲಿ ಬಣ್ಣದ ಒಂದು ಪಕ್ಷಿ ಎಂಬ ಅರ್ಥ ಇದೆ.
ಇದಲ್ಲದೇ ಮನ್ಸೂರ್ ಹಾಗೂ ಇನ್ನೂ ಹಲವು ಹೆಸರಿನ ಬಗ್ಗೆ ಕರೀನಾ ದಂಪತಿ ಆಲೋಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲಾ ವಿಷಯಗಳ ಬಗ್ಗೆ ಕರೀನಾ-ಸೈಫ್ ಅಲಿ ಖಾನ್‍ರಿಂದಲೇ ಸ್ಪಷ್ಟನೆ ಸಿಗಬೇಕಿದೆ. ಕರೀನಾ ದಂಪತಿಯ ಮೊದಲ ಪುತ್ರ ತೈಮೂರ್ ಈಗಾಗಲೇ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ಫೇಮಸ್ ಆಗಿದ್ದಾನೆ. ಆದರೆ ವಿರುಷ್ಕಾ ದಂಪತಿಯಂತೆ ಕರೀನಾ ದಂಪತಿ ಕೂಡ ತಮ್ಮ ಎರಡನೇ ಮಗುವನ್ನು ಸಾಮಾಜಿಕ ಜಾಲತಾಣದಿಂದ ದೂರವಿಟ್ಟು ಬೆಳೆಸಬೇಕೇಂಬ ತೀರ್ಮಾನ ಕೈಗೊಂಡಂತೆ ಕಂಡು ಬರುತ್ತಿದೆ.
ಕರೀನಾ-ಸೈಫ್ ಅಲಿ ಖಾನ್ ಎರಡನೇ ಪುತ್ರನ ಹೆಸರಿನ ವಿಷಯ ಇಷ್ಟೊಂದು ಚರ್ಚೆಯಾಗಲು ಇನ್ನೊಂದು ಕಾರಣವಿದೆ. ಮೊದಲ ಪುತ್ರನಿಗೆ ಅವರು ತೈಮೂರ್ ಎಂದು ಹೆಸರಿಟ್ಟಿದ್ದರು. ಅದು ದಾಳಿಕೋರ, ಕ್ರೂರ ರಾಜನ ಹೆಸರು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ತಮ್ಮ ಎರಡನೇ ಮಗನಿಗೆ ಹೆಸರಿಡುವಾಗ ಕರೀನಾ ದಂಪತಿ ತುಂಬಾ ಎಚ್ಚರವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.