ಗುಟ್ಕಾ ಉಗುಳುವಾಗ ಟ್ರ್ಯಾಕ್ಟರ್‌ಗೆ ತಲೆ ತಾಗಿ ವ್ಯಕ್ತಿ ಸಾವು

Public TV
1 Min Read
gdg accident

ಗದಗ: ಬೈಕ್ ಮೇಲಿದ್ದವ ಗುಟ್ಕಾ ಉಗುಳುವಾಗ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಗೆ ತಲೆ ತಾಗಿ ಕೆಳಗೆ ಬಿದ್ದಿದ್ದಾನೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Police Jeep 1 2 medium

ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಬಳಿ ಘಟನೆ ನಡೆದಿದೆ. ಕುರ್ಲಗೇರಿ ಗ್ರಾಮದ 35 ವರ್ಷದ ನಿಂಗಪ್ಪ ಕಳಕಣ್ಣವರ ಮೃತ ಪಟ್ಟಿದ್ದಾನೆ. ಒಂದೇ ಬೈಕ್ ನಲ್ಲಿ 3 ಜನ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಹಿಂದೆ ಕುಳಿತ ನಿಂಗಪ್ಪ, ಬಾಗಿ ಗುಟ್ಕಾ ಉಗುಳಲು ಹೋಗಿದ್ದಾರೆ. ಆಗ ಆಯಾತಪ್ಪಿ ಹಿಂದೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಗೆ ತಲೆ ತಾಗಿದೆ. ಈ ವೇಳೆ ಕೆಳಗೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪದಪ್ಪಿದ್ದಾನೆ. ಇನ್ನಿಬ್ಬರಿಗೂ ಗಾಯಗಳಾಗಿವೆ.

Police Jeep

ಬೈಕ್ ಸವಾರರು ಸುರಕೋಡದಿಂದ ನರಗುಂದಕ್ಕೆ ಬರುತ್ತಿದ್ದರು ಎನ್ನಲಾಗುತ್ತಿದೆ. ಗಾಯಾಳುಗಳನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article