ಗಾಂಧಿನಗರ: ಡ್ರ್ಯಾಗನ್ ಫ್ರೂಟ್ ನ್ನು ಇನ್ನು ಮುಂದೆ ಕಮಲ ಹಣ್ಣು ಎಂದು ಕರೆಯಬೇಕೆಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಘೋಷಣೆ ಮಾಡಿದ್ದಾರೆ.
Advertisement
ಗುಜರಾತ್ ಸರ್ಕಾರದಿಂದ ಡ್ರ್ಯಾಗನ್ ಫ್ರೂಟ್ ಹೆಸರು ಬದಲಾವಣೆಗೆ ನಿರ್ಧರಿಸಲಾಗಿದ್ದು, ಹಣ್ಣು ಹೊರಗಿನಿಂದ ತಾವರೆಯಂತೆ ಕಾಣಿಸುತ್ತದೆ. ಡ್ರ್ಯಾಗನ್ ಹೆಸರು ಕೇಳಲು ಅಷ್ಟು ಸೊಗಸಾಗಿಲ್ಲ. ಅಲ್ಲದೆ ಈ ಹೆಸರು ಚೀನಾ ಜೊತೆ ಥಳುಕು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಮಲಂ ಹಣ್ಣು ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಈಗಾಗಲೇ ಕಮಲಂ ಹಣ್ಣು ಹೆಸರಿಗೆ ಪೇಟೆಂಟ್ ಪಡೆಯಲು ಯತ್ನಿಸಲಾಗಿದೆ. ಈಗಿನಿಂದಲೇ ಕಮಲಂ ಹಣ್ಣು ಹೆಸರು ಜಾರಿ ಮಾಡಲಾಗಿದೆ.
Advertisement
Advertisement
ಕಮಲಂ ಸಂಸ್ಕೃತ ಶಬ್ದ, ಹಣ್ಣಿನ ಆಕಾರ ಕಮಲದ ಹೂವಿನಂತಿದೆ. ಹೀಗಾಗಿ ಕಮಲಂ ಎಂದು ಹೆಸರಿಡಲಾಗಿದೆ. ಈ ಹೆಸರು ಘೋಷಣೆಯ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಸ್ಪಷ್ಟನೆ ನೀಡಿದ್ದಾರೆ. ಕಮಲ ಬಿಜೆಪಿಯ ಚಿಹ್ನೆಯೂ ಹೌದು. ಅಲ್ಲದೆ ಗುಜರಾತ್ ಗಾಂಧಿನಗರದ ಬಿಜೆಪಿ ಕಚೇರಿಯ ಹೆಸರೂ ಕಮಲಂ ಆಗಿದೆ.