ಹಾವೇರಿ: ವೀರಮಹೇಶ್ವರನ ಗುಗ್ಗಳದ ವೇಳೆ ಸಾಮಾಳದ ಸದ್ದಿಗೆ ಗೊಬೆ ಕತ್ತು ಹೊರಳಾಡಿಸುತ್ತಿದ್ದ ನೋಡಿ ಭಕ್ತರು ಆಚ್ಚರ್ಯ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ವೀರಮಹೇಶ್ವರನ ಜಾತ್ರೆ ನಡೆಯುತ್ತಿತ್ತು. ದೇವಸ್ಥಾನದ ಮುಂದೆ ವೀರಮಹೇಶ್ವರನ ಗುಗ್ಗಳ ನಡೆದಿದ್ದ ವೇಳೆ ಪಕ್ಕದ ದ್ಯಾಮವ್ವದೇವಿ ದೇವಸ್ಥಾನದ ಮೇಲೆ ಕುಳಿತು ಕತ್ತು ಗೂಬೆ ಹೊರಳಾಡಿಸ್ತಿದೆ. ಸಾಮಾಳದ ಸದ್ದಿಗೆ ಕತ್ತು ಹೊರಳಾಡಿಸ್ತಿದ್ದ ಗೂಬೆಯನ್ನ ಕಂಡ ಜನ ಒಂದು ಕ್ಷಣ ಆಶ್ಚರ್ಯ ಚಕಿತರಾಗಿ ದೃಶ್ಯಗಳನ್ನ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.
ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕುಳಿತಲ್ಲೇ ಕುಳಿತು ಗೂಬೆ ಸಂಗೀತಕ್ಕೆ ಮನಸೋತಂತೆ ತಲೆಯಾಡಿಸಿದೆ. ಗೂಬೆಯ ವಿಡಿಯೋವನ್ನ ಸ್ಥಳೀಯರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯಮಟ್ಟದಲ್ಲಿ ವಿಡಿಯೋ ವೈರಲ್ ಆಗಿದೆ.