ದಿಸ್ಪುರ್: ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ 7 ಜನ ನ್ಯಾಷನಲ್ ಲಿಬರ್ಟಿ ಆರ್ಮಿ(ಡಿಎನ್‍ಎಲ್‍ಎ) ಉಗ್ರರು ಹತರಾಗಿದ್ದಾರೆ.
ಅಸ್ಸಾಂ ನಾಗಲ್ಯಾಂಡ್ ಗಡಿಯ ವೆಸ್ಟ್ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ನಾಲ್ಕು ಎಕೆ-47 ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಇನ್ನೂ ಕೆಲ ಉಗ್ರರು ಸ್ಥಳದಲ್ಲಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
Assam | In a joint operation, Assam Police & Assam Rifles neutralised 6 DNLA terrorists in Dhansiri Area of Karbi Anglong, during the early morning today pic.twitter.com/EMkeLTCTLB
— ANI (@ANI) May 23, 2021
Advertisement
ಗುಂಡಿನ ಚಕಮಕಿ ವೇಳೆ 7 ಜನ ಡಿಎನ್‍ಎಲ್‍ಎ ಉಗ್ರರು ಹತ್ಯೆಗೀಡಾಗಿದ್ದು, ಎಕೆ 47 ಸೇರಿದಂತೆ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಹಿತಿ ಪ್ರಕಾರ ಇಬ್ಬರು ಅವರ ನಾಯಕರು ಸಹ ಗಾಯಗೊಂಡಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Advertisement
ಗುಪ್ತಚರ ದಳದ ಮಾಹಿತಿ ಮೇರೆಗೆ ವೆಸ್ಟ್ ಕರ್ಬಿ ಆಂಗ್ಲಾಂಗ್ ಎಎಸ್‍ಪಿ ಪ್ರಕಾಶ್ ಸೋನೋವಾಲ್ ನೇತೃತ್ವದಲ್ಲಿ ಅಸ್ಸಾಂ ರೈಫಲ್ಸ್ ಪರಸನಲ್ ಹಾಗೂ ಪೊಲೀಸರ ತಂಡ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿವೆ.
Advertisement
In a joint operation, Assam Police & Assam Rifles neutralised 6 DNLA terrorists in Dhansiri Area of Karbi Anglong, during the early morning today. A huge cache of arms & ammunition has been recovered: Assam Police
— ANI (@ANI) May 23, 2021
ಮೇ 14ರಂದು ಅಸ್ಸಾಂನ ತಿನ್ಸೂಕಿಯಾ ಪ್ರದೇಶದಲ್ಲಿ ನಡೆದ ಗ್ರನೇಡ್ ದಾಳಿ ವೇಳೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಸಹ ಜಿಲ್ಲೆಯಲ್ಲಿ ಗ್ರೆನೇಡ್ ಸ್ಫೋಟಗೊಂಡು ಅಪ್ರಾಪ್ತ ಸಾವನ್ನಪ್ಪಿದ್ದ.