ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತವಾಗಿ ಸೆಲೆಬ್ರೆಟಿಗಳು ಗಿಡನೆಟ್ಟು ಪರಿಚರ Pಕುರಿತಾಗಿ ಕೆಲವು ಸಾಲುಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಕೋರಿದ್ದಾರೆ. ಮನುಷ್ಯದ ಜೀವನದಲ್ಲಿ ಪ್ರಕೃತಿ ಬಹಳ ಮುಖ್ಯ, ಪರಿಸರ ಆರೋಗ್ಯವಾಗಿದ್ದರೆ ಮಾನವರ ಮುಂದಿನ ಪೀಳಿಗೆ ಆರೋಗ್ಯವಾಗಿರಲು ಸಾಧ್ಯ ಎಂಬ ಸಂದೇಶ ಸಾರಿದ್ದಾರೆ.
???????????? pic.twitter.com/28IxYjuy94
— Kichcha Sudeepa (@KicchaSudeep) June 5, 2021
ನಮ್ಮ ಜೀವನ ಪರಿಸರ ಇರುವವರೆಗೆ ಮಾತ್ರ ಎಂಬುದನ್ನು ಮರೆಯದಿರಿ, ನಮಗೆ ಬೇಕಾದಂತೆ ಪರಿಸರ ಬದಲಾಯಿಸುವ ಬದಲು, ಪರಿಸರಕ್ಕೆ ತಕ್ಕಂತೆ ನಾವು ಬದಲಾಗೋಣ ಎಂಬ ಸಂದೇಶವನ್ನು ಬರೆದುಕೊಂಡು ಪರಿಸರ ದಿನಾಚರಣೆಯ ಶುಭಾಶಯೊಂದಿಗೆ ಸಂದೇಶವನ್ನು ಕಿಚ್ಚ ಸುದೀಪ್ ನೀಡಿದ್ದಾರೆ. ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ
View this post on Instagram
ನಟ ಶರಣ್ ಸಹ ಟ್ವಿಟ್ಟರ್‌ನಲ್ಲಿ ಪರಿಸರ ದಿನಕ್ಕೆ ಶುಭಕೋರಿದರು. ಗುರುಶಿಷ್ಯರು ಚಿತ್ರದ ಸೆಟ್‍ನಲ್ಲಿ ಗಿಡ ನೆಡಲಾಗಿತ್ತು. ಆ ಫೋಟೋ ಶೇರ್ ಮಾಡಿ ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ. ಗುರುಶಿಷ್ಯರು ಚಿತ್ರದ ಶೂಟಿಂಗ್ ದಿನಗಳಲ್ಲಿ ಒಂದು ಪುಟ್ಟ ತೆಂಗಿನ ಸಸಿ ನೆಟ್ಟಿದ್ದ ನೆನಪುಗಳು ಎಂದು ಮೆಲುಕು ಹಾಕಿದ್ದಾರೆ.
View this post on Instagram
ಹೆಚ್ಚಿನ ಮರಗಳನ್ನು ನೆಡೋಣ, ಪರಿಸರ ಸ್ನೇಹಿ ಕೆಲಸಗಳಿಗೆ ಹೊಂದಿಕೊಳ್ಳೋಣ ಎಂದು ತೆಲುಗು ನಟ ಅಲ್ಲು ಅರ್ಜುನ್ ಗಿಡವೊಂದನ್ನು ನೆಡುವ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಮೂಲಕ ಪರಿಸರ ದಿನಕ್ಕೆ ಶುಭಕೋರಿದರು. ಸ್ಯಾಂಡಲ್‍ವುಡ್ ನಟ ಸತೀಶ್ ನಿನಾಸಂ ಹಚ್ಚ ಹಸಿರಿನ ವಾತಾವರಣದಲ್ಲಿ ಕುಳಿತು ಕ್ಲೀಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸೇರ್ ಮಾಡಿಕೊಂಡು ಪರಿಸರ ದಿನಾಚರಣೆ ಶುಭಕೋರಿದ್ದಾರೆ.
View this post on Instagram
ಪರಿಸರ ದಿನಾಚರಣೆಯ ಅಂಗವಾಗಿ ಸುಮಾರು 150 ಗಿಡಗಳನ್ನು ನೆಟ್ಟಿದ್ದೇವೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರಾಗಿಡೋಣ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುವ ಮೂಲಕ ಸ್ಯಾಂಡಲ್‍ವುಡ್ ನಟಿ ರಾಗಿಣಿ ಪರಿಸರ ದಿನವನ್ನು ಆಚರಿಸಿದ್ದಾರೆ.
ಬಾಲಿವುಡ್‍ನಲ್ಲಿ ಕರೀನಾ ಕಪೂರ್, ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರು ಪರಿಸರ ದಿನಕ್ಕೆ ವಿಶ್ ಮಾಡಿದ್ದಾರೆ.