ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಅರ್ಜುನ್ ಜನ್ಯ

Public TV
1 Min Read
FotoJet 11 9

ಬೆಂಗಳೂರು: ಸ್ಯಾಂಡಲ್‍ವುಡ್‍ನ ಮ್ಯಾಜಿಕಲ್ ಕಂಪೋಸರ್ ಎಂದೇ ಫೇಮಸ್ ಆಗಿರುವ ಅರ್ಜುನ್ ಜನ್ಯರವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದವು. ಇದೀಗ ಈ ಬಗ್ಗೆ ಸ್ವತಃ ಅರ್ಜುನ್ ಜನ್ಯರವರೇ ಪ್ರತಿಕ್ರಿಯಿಸುವ ಮೂಲಕ ಸುಳ್ಳು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

arjun

ಈ ವಿಚಾರವಾಗಿ ಅರ್ಜುನ್ ಜನ್ಯರವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ, ಈ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕುಟುಂಬದ ಪರಿಸ್ಥಿಯ ಬಗ್ಗೆ ಹಾಗೂ ನನ್ನ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ. ಇದು ಸರಿ ಹೋಗಬಹುದೆಂದು ನಾನು ಸಮಾಧಾನವಾಗಿದ್ದೆ, ಆದರೆ ದಿನೇ ದಿನೇ ಇದು ಹೆಚ್ಚಾಗುತ್ತಿದೆ. ಜನರಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ. ಏಕೆಂದರೆ ಸಾಮಾಜಿಕ ಜಾಲಾತಾಣಗಳಲ್ಲಿ ನೀಡುತ್ತಿರುವ ಮಾಹಿತಿ ಅಪ್ಪಟ ಸುಳ್ಳು, ನಾನು ಆರೋಗ್ಯವಾಗಿಯೇ ಇದ್ದೇನೆ. ನನಗೆ ಕೋವಿಡ್ ಬಂದು ಗುಣಮುಖನಾಗಿ ವೈದ್ಯರ ಸಲಹೆಯಂತೆ, ಈಗ ಮನೆಯಲ್ಲಿಯೇ ಹತ್ತು ದಿನದ ಐಸೋಲೇಶನ್‍ನಲ್ಲಿದ್ದೇನೆ. ಇದರಲ್ಲಿ ಈಗಾಗಲೇ ಆರು ದಿನಗಳು ಪೂರ್ಣಗೊಂಡಿದೆ. ಇನ್ನು ಉಳಿದ ನಾಲ್ಕೈದು ದಿನಗಳು ಕಳೆದ ನಂತರ ನನ್ನ ದೈನಂದಿನ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

FotoJet 10 13

ಮತ್ತೊಮ್ಮೆ ಈ ರೀತಿಯ ಹೀನ ಕಾರ್ಯಗಳನ್ನು ಮಾಡುತ್ತಿರುವವರಲ್ಲಿ ವಿನಂತಿಸಿಕೊಳ್ಳುತ್ತೇನೆ. ಇನ್ನು ಮುಂದಾದರೂ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಅಂತಾ ವಿನಂತಿಸಿಕೊಳ್ಳುತ್ತೇನೆ. ಇದರಿಂದ ಜನರಲ್ಲಿ ಕಳವಳ ಹಾಗೂ ಕುಟುಂಬದವರಿಗೂ ಇದರಿಂದ ಮಾನಸಿಕವಾಗಿ ನೋವು ಹಾಗೂ ತೊಂದರೆಯಾಗುತ್ತದೆ.

ಈಗಾಗಲೇ ನನ್ನ ಗಮನಕ್ಕೆ ಬಂದಂತಹ ಎಲ್ಲಾ ಸಾಕ್ಷಿಗಳನ್ನು ಸೈಬರ್ ಪೊಲೀಸ್‍ಗೆ ನೀಡಿದ್ದೇನೆ. ದಯವಿಟ್ಟು ನೀವು ಮಾಡಿದ ವೀಡಿಯೋಗಳನ್ನು ಈ ಕೂಡಲೇ ತೆಗೆಯಬೇಕೆಂದು ಕೇಳಿಕೊಳ್ಳುತ್ತೇನೆ. ಇಂತಹ ಸಂದರ್ಭಗಳಲ್ಲಿ ಸಾಧ್ಯವಾದರೆ ಒಳ್ಳೆಯದನ್ನು ಬಯಸಿ ಸಹಕರಿಸಿ ಎಂದು ಲೆಟರ್ ಒಂದನ್ನು ಪೋಸ್ಟ್ ಮಾಡಿದ್ದಾರೆ.

FotoJet 12 10

ಕಳೆದ ವರ್ಷ ಅರ್ಜುನ್ಯ ಜನ್ಯನವರು ಹೃದಾಯಾಘಾತಕ್ಕೆ ಒಳಗಾಗಿ ಮೈಸೂರಿನ ರಿಂಗ್ ರೋಡ್ ಬಳಿ ಇರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

Share This Article