ಗಾಳಕ್ಕೆ ಬಿತ್ತು ಭಾರೀ ಗಾತ್ರದ ಮುಗುಡು ಮೀನು

Public TV
1 Min Read
UDP

ಉಡುಪಿ: ಭಾರೀ ಮಳೆ ಮತ್ತು ನೆರೆಯ ನಂತರ ಮೀನುಗಳು ಬಲೆ, ಗಾಳಕ್ಕೆ ಬೀಳುತ್ತಿವೆ. ಉಡುಪಿ ನಗರದ ಕೊಡವೂರು ಗ್ರಾಮದ ಇಂದ್ರಾಣಿ ನದಿಯಲ್ಲಿ ಬೃಹತ್ ಗಾತ್ರದ ಮೀನೊಂದು ಗಾಳಕ್ಕೆ ಸಿಕ್ಕು ಅಚ್ಚರಿ ಮೂಡಿಸಿದೆ.

97db7d3f ae43 48be be34 6f448c9fa625

ಗಾಳಕ್ಕೆ ಸಣ್ಣಪುಟ್ಟ ಮೀನುಗಳು ಸಿಗುವುದು ಮಾಮೂಲು. ವಿಚಿತ್ರವೆಂಬಂತೆ ಸುಮಾರು 10 ಕೆಜಿ ತೂಕದ ಮುಗುಡು ಮೀನು ಗಾಳಕ್ಕೆ ಸಿಕ್ಕಿರುವುದು ಗಾಳ ಹಾಕಿದವನಿಗೂ ಖುಷಿಕೊಟ್ಟಿದೆ. ಸುಮಾರು ಮೂರೂವರೆ ಅಡಿ ಉದ್ದ ಇರುವ ಈ ಮೀನನ್ನು ತುಳುವಿನಲ್ಲಿ ಮುಗುಡು ಮೀನು ಎಂದು ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಇದು ಕ್ಯಾಟ್ ಫಿಶ್. ಬೆಕ್ಕಿನ ತರಹ ಮೀಸೆಯನ್ನು ಹೊಂದಿರುವ ಮೀನು ಕನ್ನಡದಲ್ಲಿ ಬೆಕ್ಕುಮೀನು ಎಂದು ಜನಜನಿತವಾಗಿದೆ.

UDP 1

ಕೆರೆಯಲ್ಲಿ ಹೆಚ್ಚಾಗಿ ಸಿಗುವ ಈ ಸಿಹಿ ನೀರ ಮೀನು ತನ್ನ ರುಚಿಯಿಂದಲೇ ಕರಾವಳಿಯಲ್ಲಿ ಫೇಮಸ್ಸಾಗಿದೆ. ನಗರ ಪ್ರದೇಶದಲ್ಲಿ ಅತಿಯಾದ ರೇಟ್ ಗೆ ಈ ಮುಗುಡು ಮೀನು ಮಾರಾಟವಾಗುತ್ತೆ. ಮೂರ್ನಾಲ್ಕು ಮನೆಯವರು ಮುಗುಡು ಮೀನನ್ನು ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *