ಬೆಂಗಳೂರು: ಎಸ್.ಆರ್ ಬೊಮ್ಮಾಯಿ ಗುಣ ಬಸವರಾಜ ಬೊಮ್ಮಾಯಿಗೆ ಬರುತ್ತೆ ಎಂದು ಹೇಳಲಾಗದು. `ಗಾಂಧಿ ಮಗ ಕುಡುಕನಾದ’ ಎಂದು ಮೈಸೂರಿನಲ್ಲಿ ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ಕುರಿತು ಬಿಜೆಪಿ ಈಗ ಸಾಮಾಜಿಕ ಜಾಲತಾಣದಲ್ಲಿ ಕುಟುಕಿದೆ.
Advertisement
ಸಿದ್ದರಾಮಯ್ಯಗೆ ಬಿಜೆಪಿ ಟ್ವಿಟ್ಟರ್ ಮೂಲಕ ಪ್ರಶ್ನೆ ಹಾಕಿದ್ದು, `ಸಿದ್ದರಾಮಯ್ಯನವರೇ ನೀವು ಹೇಳಿದ್ದು ಯಾವ ಗಾಂಧಿ ಮಗನ ಬಗ್ಗೆ’ `ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ, ಸೋನಿಯಾ ಗಾಂಧಿ ಪುತ್ರನ ಬಗ್ಗೆಯೋ?’ `ನಿಮ್ಮ ಮಗ ರಾಕೇಶ್ ಸಿದ್ದರಾಮಯ್ಯ ಅತಿಯಾಗಿ ಕುಡಿಯುತ್ತಿದ್ದರು ಎಂದು ವರದಿ’ ಇದೆಲ್ಲ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ ಯತೀಂದ್ರ ಸಿದ್ದರಾಮಯ್ಯಗೆ ನಿಮ್ಮ ಗುಣ ಎಷ್ಟು ಬಂದಿದೆ ಎಂದು ಬಿಜೆಪಿ ಪ್ರಶ್ನಿಸಿದೆ.
Advertisement
Advertisement
ಇಂದು ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅಪ್ಪನಿಗಿಂತ ಬುದ್ಧಿವಂತ ಆಗಬಹುದು. ದಡ್ಡರು ಸಹ ಆಗಬಹುದು. ಮಹಾತ್ಮ ಗಾಂಧಿಯವರನ್ನು ನಾವು ಮಹಾತ್ಮ ಎಂದು ಕರೆಯುತ್ತೇವೆ. ಅವರ ಮಗ ಕೆಟ್ಟ ಅಭ್ಯಾಸಗಳನ್ನು ಕಲಿತಿದ್ದರು. ಬುದ್ದಿವಂತರ ಮಕ್ಕಳು ಜಾಣರು ಆಗಬಹುದು. ದಡ್ಡರು ಆಗಬಹುದು ಎಂದು ಹೇಳಿದ್ದೇನೆ ಅಷ್ಟೇ ಎಂದು ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದರು.
Advertisement
ಸಿಎಂ ಬೊಮ್ಮಾಯಿಗೆ ತಂದೆಯ ಗುಣ ಮಗನಿಗೆ ಬರಾದು ಎಂದು ನಿನ್ನೆ ಮೈಸೂರಿನಲ್ಲಿ ನೀಡಿದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಆ ರೀತಿ ಹೇಳಿಲ್ಲ. ತಂದೆಯ ಗುಣ ಮಕ್ಕಳಿಗೆ ಬರಬೇಕೆಂದಿಲ್ಲ. ಅಪ್ಪನಿಗಿಂತ ದಡ್ಡರೂ ಆಗಬಹುದು, ಬುದ್ಧಿವಂತರೂ ಆಗಬಹುದು. ಬರುತ್ತದೆ ಅಂತಾನೂ ಹೇಳಿಲ್ಲ. ಬರುವುದಿಲ್ಲ ಅಂತಾನೂ ಹೇಳಿಲ್ಲ. ಗಾಂಧೀಜಿ ಪುತ್ರ ಹರಿದಾಸ್ ಇರಲಿಲ್ವಾ, ಅವರು ಕೆಲ ಕೆಟ್ಟ ಗುಣ ಕಲಿತಿದ್ದರು. ಆದರೆ ಗಾಂಧೀಜಿಗೆ ನಾವು ಮಹತ್ಮಾ ಎನ್ನುತ್ತೇವೆ ಎಂದು ನಿನ್ನೆಯ ಹೇಳಿಕೆಗೆ ಸ್ಪಷ್ಟನೆ ಕೊಟ್ಟರು.ಇದನ್ನೂ ಓದಿ: ಬೊಮ್ಮಾಯಿ ಸ್ವತಂತ್ರವಾಗಿ ಆಡಳಿತ ನಡೆಸೋದು ಸಾಧ್ಯನಾ?: ಸಿದ್ದರಾಮಯ್ಯ
ರಾಜ್ಯ ಸರ್ಕಾರದ ಎರಡು ವರ್ಷಗಳ ವೈಫಲ್ಯಗಳ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಎಸ್‍ವೈ ಎರಡು ವರ್ಷ ಪೂರೈಸಿ ರಾಜೀನಾಮೆ ನೀಡಿದ್ದಾರೆ. ನೂತನವಾಗಿ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರಿಗೆ ಅಭಿನಂದನೆ, ಶುಭವಾಗಲಿ ಎಂದು ಹಾರೈಸುತ್ತೇನೆ. ಬಿಜೆಪಿ ಸರ್ಕಾರ ಹೇಗೆ ಅಸ್ತಿತ್ವಕ್ಕೆ ಬಂತು ಎಲ್ಲರಿಗೂ ಗೊತ್ತು. ಶಾಸಕರ ಖರೀದಿಸಿ ವಾಮಮಾರ್ಗದಲ್ಲಿ ರಚಿಸಿದ ಸರ್ಕಾರ. ಹಾಗಾಗಿ ಇದು ಅನೈತಿಕ ಸರ್ಕಾರ. ಎರಡು ವರ್ಷ ದುರಾಡಳಿತ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಮಾಡದೇ ಇರುವುದೇ ಇವರ ಸಾಧನೆ. ಭ್ರಷ್ಟಾಚಾರ ತಾರಕಕ್ಕೇರಿದ್ದಕ್ಕೆ ಉದಾಹರಣೆ, ಮಕ್ಕಳಿಗೆ ನೀಡುವ ಹಣವನ್ನೂ ಲೂಟಿ ಹೊಡೆದಿದ್ದಾರೆ. ಕೋವಿಡ್ ಸಾಮಗ್ರಿಗಳಲ್ಲಿ ದುಡ್ಡು ಹೊಡೆದಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ವೈಫಲ್ಯ. ಅದರಿಂದಾಗಿ ಸಹಸ್ರಾರು ಅಮಾಯಕರು ಬಲಿಯಾದರು. ಇದಕ್ಕೆ ಸರ್ಕಾರವೇ ನೇರ ಹೊಣೆ. ವಾಸ್ತವ ಬಚ್ಚಿಟ್ಟು ಸುಳ್ಳು ಹೇಳಿಕೊಂಡು ತಿರುಗಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಂತಕ್ಕೆ ತಂದು ನಿಲ್ಲಿಸಿದ್ದೇ ಬಿಎಸ್‍ವೈ ಸಾಧನೆ. 5 ವರ್ಷದಲ್ಲಿ ನಾವು ವಿತ್ತೀಯ ಮಿತಿಯಲ್ಲಿ 1.25 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಬಿಎಸ್‍ವೈ ಎರಡೇ ವರ್ಷದಲ್ಲಿ 1.43ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದು ವಿತ್ತೀಯಮಿತಿ ಮೀರಿ ಮಾಡಿದ್ದಾರೆ. ರಾಜ್ಯದ ಜಿಎಸ್‍ಟಿ ಪಾಲು ನೀಡದೇ ನಿರ್ಲಕ್ಷವಹಿಸಲಾಗಿದ್ದು, ಸುಮಾರು 5,500 ಕೋಟಿ ರೂಪಾಯಿ ರಾಜ್ಯದ ಪಾಲು ಕೊಡದೇ ಕೇಂದ್ರ ಸರ್ಕಾರದಿಂದ ಮೋಸವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯವನ್ನು ಪ್ರತಿನಿಧಿಸುತ್ತ ಇದ್ದರೂ ಉಡಾಫೆ ಧೋರಣೆ ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಬಲ್ ಇಂಜಿನ್ ಸರ್ಕಾರದಲ್ಲಿ ಎಲ್ಲಿ ಸ್ವರ್ಗ ಸೃಷ್ಠಿ ಆಯ್ತು. ಯಡಿಯೂರಪ್ಪ ಎಂದಾದರೂ ಬಾಯಿ ಬಿಟ್ಟು ಮಾತನಾಡಿದ್ದಾರ? ಬಸವರಾಜ್ ಬೊಮ್ಮಾಯಿ ಅವರು ಜಿಎಸ್‍ಟಿ ಕೌನ್ಸಿಲ್ ಗೆ ಹೋಗ್ತಾ ಇದ್ರು ಅವರಿಗೂ ಗೊತ್ತು. ಏಕೆ ಆಗ ಬಾಕಿ ಕೇಳಿಲ್ಲ? ಬೊಮ್ಮಾಯಿ ನೀವು ಸ್ನೇಹಿತರು ಎಂಬ ವಿಚಾರ ಅದರಲ್ಲಿ ಏನು ಅನುಮಾನ ಇಲ್ಲ. ನಾನು ಬೊಮ್ಮಾಯಿ ಅವರು ಚನ್ನಾಗಿದ್ದೇವೆ. ಆದರೆ ಈ ಬೊಮ್ಮಾಯಿ ಅಲ್ಲ. ನಾವು ರಾಜಕೀಯ ಕಣ್ಣಲ್ಲಿ ನೋಡುವವರು. ಅವರು ಹೋಗಿ ಕೋಮುವಾದಿ ಪಾರ್ಟಿ ಸೇರಿಕೊಂಡರು ಬಳಿಕ ನಮ್ಮ ರಾಜಕೀಯ ಸಂಬಂಧ ಕಡಿದು ಹೋಯ್ತು. ಮನುಷ್ಯ ಸಂಬಂಧದಲ್ಲಿ ಪ್ರೀತಿ ಸಹಜವಾಗಿಯೇ ಇರುತ್ತೆ ಅಷ್ಟೇ ಎಂದರು.
ಈ ಹಿಂದೆ ಪ್ರವಾಹ ಬಂದು ನಷ್ಟಕ್ಕೊಳಗಾದವರಿಗೆ ಬಿಜೆಪಿ ಸರ್ಕಾರ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಹಾನಿಗೊಳಗಾದ ಮನೆ ನಿರ್ಮಿಸಲು ಸಹಾಯ ಮಾಡಿಲ್ಲ. ಪ್ರವಾಹ ಪೀಡಿದ ಜನರಿಗೆ ಇವರಿಂದ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಆಗಸ್ಟ್ 1 ರಂದು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಅಸೆಂಬ್ಲಿ ಕರೆಯಿರಿ ಎಂದು ಮಾಡಿದ ಒತ್ತಾಯ ಅರಣ್ಯರೋದನವಾಗಿದೆ. ಸಮಸ್ಯೆ ಚರ್ಚಿಸಲು ಅಧಿವೇಶನ ಕರೆಯಲು ಸರ್ಕಾರ ಸಿದ್ಧವಿಲ್ಲ. ಈಗಲೂ ನಮ್ಮ ಒತ್ತಾಯ ಮುಂದುವರಿದಿದೆ. ಯಡಿಯೂರಪ್ಪ ಸರ್ಕಾರ ಮುಂದುವರಿದರೆ ಹೀನಾಯವಾಗಿ ಸೋಲುತ್ತದೆ ಎಂದು ಮೋದಿ ಯಡಿಯೂರಪ್ಪನ ಬದಲಾಯಿಸಿದರು. ಕೆಟ್ಟು ಹೆಸರು ಬರುತ್ತಿದೆ. ಮುಂದೆ ಅಧಿಕಾರಕ್ಕೆ ಬರೋಲ್ಲ ಎಂದು ಬದಲಾಯಿಸಿದರು. ಆದರೆ ಅದರಿಂದ ಏನು ಪ್ರಯೋಜನ ಆಗುವುದಿಲ್ಲ. ಯಾಕೆಂದರೆ ಬೊಮ್ಮಾಯಿಯನ್ನು ಯಡಿಯೂರಪ್ಪನೇ ಮಾಡಿದ್ದು, ಅವರು ಯಡಿಯೂರಪ್ಪನ ಆಬ್ಲಿಗೇಷನ್ ಅಲ್ಲಿ ಇರಬೇಕಾಗುತ್ತೆ. ಯಡಿಯೂರಪ್ಪನ ಮರ್ಜಿಯಲ್ಲಿ ಇರಬೇಕಾಗುತ್ತೆ ಅವರನ್ನು ಶಾಡೋ ಸಿಎಂ ಎಂದು ಹೇಳಲ್ಲ ಮರ್ಜಿಯಲ್ಲಿ ಇರಬೇಕಾಗುತ್ತೆ. ಆದರು ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲಿ. ವಿಳಂಬ ಮಾಡುವುದು ಸರಿಯಲ್ಲ. ರಾಜ್ಯದಲ್ಲಿನ ಪ್ರವಾಹ, ಕೋವಿಡ್ ನಿಯಂತ್ರಣ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.