ಮಡಿಕೇರಿ: ಶಾಲಾ ಮೈದಾನದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದರು.
ಬಂಧಿತರನ್ನು ಮೈಸೂರಿನ ಹೆಬ್ಬಾಳ ನಿವಾಸಿ ಆನಂದ, ವಿರಾಜಪೇಟೆ ತಾಲೂಕಿನ ಮೊಗರಗಲ್ಲಿ ನಿವಾಸಿ ಖಲೀಲ್, ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ನಿವಾಸಿ ಕೆ.ಎಸ್.ಫರೀದ್, ಅಭ್ಯತ್ಮಂಗಲ ನಿವಾಸಿಗಳಾದ ಹೆಚ್.ಎನ್.ನಿಖಿಲ್ ಮತ್ತು ಹೆಚ್.ಎಸ್.ಹರೀಶ್ ಹಾಗೂ ಚೇರಳ ಶ್ರೀಮಂಗಲದ ನಿವಾಸಿ ಕೆ.ಎನ್.ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟಳ್ಳಿಯ ಫ್ರೌಡಶಾಲಾ ಮೈದಾನದ ಸಮೀಪ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 5 ಕೆ.ಜಿ ಗಾಂಜಾ, ನಗದು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರು, ಆಟೋರಿಕ್ಷಾ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 8.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ತಿಳಿಸಿದರು.