ಶಿವಮೊಗ್ಗ: ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಇಂದು ವಿವಿಧ ಠಾಣೆಗಳಲ್ಲಿ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಪರೇಡ್ ನಡೆಸಲಾಯಿತು.
Advertisement
ಪರೇಡ್ ನಲ್ಲಿ ಸುಮಾರು 89 ಆರೋಪಿಗಳು ಭಾಗವಹಿಸಿದ್ದರು. ಈ ಎಲ್ಲಾ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗಡೆ ಇದ್ದಾರೆ. ಇನ್ನಾದರೂ ಇವರು ಸನ್ನಡತೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಪರೇಡ್ ನಲ್ಲಿ ಆರೋಪಿಗಳಿಗೆ ಎಸ್ ಪಿ ಶಾಂತರಾಜ್ ಖಡಕ್ ಎಚ್ಚರಿಕೆ ನೀಡಿದರು.
Advertisement
ಜಾಮೀನಿನ ಮೇಲೆ ಹೊರಗೆ ಬಂದವರು ಉದ್ದಿಮೆ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ನಿಮ್ಮ ಆರ್ಥಿಕ ಆದಾಯಕ್ಕೂ, ನಿಮ್ಮ ಜೀವನ ಶೈಲಿಗೂ ಮ್ಯಾಚ್ ಆಗಬೇಕು. ಒಂದು ವೇಳೆ ಮ್ಯಾಚ್ ಆಗದಿದ್ದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ನಿಮ್ಮ ಆದಾಯದ ಕುರಿತು ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ತಿಳಿಸಬೇಕು ಎಂದು ಸೂಚಿಸಿದರು.
Advertisement
Advertisement
ನಿಮ್ಮ ಮನೆಗಳಿಗೆ ಬಂದು ತಪಾಸಣೆ ಮಾಡಲಾಗುವುದು. ನಿಮ್ಮ ಮನೆಯಲ್ಲಿ ಗಾಂಜಾ ಇಡದಿದ್ದರೂ ಬೇರೆಡೆ ಇಟ್ಟಿರುವುದು ತಿಳಿದು ಬಂದರೆ ಅದಕ್ಕೆ ನೀವು ನೇರ ಹೊಣೆಯಾಗಲಿದ್ದೀರಿ ವಾರ್ನಿಂಗ್ ನೀಡಿದರು.
ಇಂದು ಗಾಂಜಾ ಆರೋಪಿಗಳನ್ನು ಕರೆಯಿಸಿರುವ ಉದ್ದೇಶ ನಿಮ್ಮ ನಡೆತೆಯನ್ನು ತಿದ್ದಿಕೊಂಡು ಪ್ರಕರಣಗಳಿಂದ ದೂರ ಇರಬೇಕು. ಸನ್ನಡತೆ ಸರಿಪಡಿಸಿ ಕೊಳ್ಳದಿದ್ದರೆ ಜಾಮೀನು ರದ್ದು ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುವುದು. ನಮ್ಮ ಬಳಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ಪೋಸ್ ನೀಡಿ ಗಾಂಜಾ ಮಾರಾಟ ಸಾಗಾಣಿಕೆಯಲ್ಲಿ ತೊಡಗಿದರೆ ಮುಂದೆ ಕಷ್ಟ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.