ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರಿಗೆ ಹೊಸ ಹೊಸ ಸಾಕ್ಷ್ಯಗಳು ಸಿಗುತ್ತಿವೆ. ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಗಲಭೆಗೆ 10 ಮಂದಿ ಫೇಸ್‍ಬುಕ್ ಲೈವ್ ಮಾಡುವ ಮೂಲಕ ಸಾವಿರಾರು ಜನರಿಗೆ ಆಮಂತ್ರಣ ನೀಡಲಾಗಿದೆ ಎಂಬುದು ತಿಳಿದುಬಂದಿದೆ.
ಡಿಜೆ ಹಳ್ಳಿ ದೊಂಬಿ ಗಲಾಟೆಗೆ ಪುಂಡರನ್ನ ಸೇರಿಸಲು ಫೇಸ್‍ಬುಕ್ ಟ್ರಿಕ್ ಬಳಸಲಾಗಿದೆ. ಗಲಾಟೆ ಶುರುವಾಗೋದಕ್ಕೂ ಮೊದಲೇ 10 ಮಂದಿ ಫೇಸ್‍ಬುಕ್ ಲೈವ್ ಮಾಡಿದ್ದರು. ಇದೇ ಖತರ್ನಾಕ್‍ಗಳು ಗಲಾಟೆ ನಡೆದ ದಿನ ಅಂದರೆ ಮಂಗಳವಾರ ರಾತ್ರಿ 50 ಜನರಿದ್ದ ಗುಂಪನ್ನು 5,000 ಮಾಡಿದ್ದರು. ನಮ್ಮ ಧರ್ಮಕ್ಕೆ ಅವಮಾನವಾಗಿದೆ ಬನ್ನಿ ಬನ್ನಿ ಅಂತ ಜನರನ್ನು ಕರೆದು ಗಲಾಟೆ ಮಾಡಿದ್ದಾರೆ.
Advertisement
Advertisement
ಇಬ್ರಾಹಿಂ ಎಂಬಾತ ಫೇಸ್‍ಬುಕ್ ಲೈವ್ ಮಾಡಿದ್ದನು. ಈತನ ಲೈವನ್ನು ಸಾವಿರಾರು ಬಂದಿ ವೀಕ್ಷಣೆ ಮಾಡಿದ್ದಾರೆ. ಫೇಸ್‍ಬುಕ್ ಲೈವ್ ಮಾಡಿದ್ದ 10 ಮಂದಿ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಶಾಸಕರ ಮನೆ ಬಳಿ ಹೆಚ್ಚು ಜನರನ್ನು ಸೇರಿಸಿದವರಾಗಿದ್ದಾರೆ. ಹೀಗಾಗಿ ಪೊಲೀಸರು ಫೇಸ್‍ಬುಕ್ ಲೈವ್ ಮಾಡಿದ ಪುಂಡರ ಬೆನ್ನು ಬಿದ್ದಿದ್ದಾರೆ.
Advertisement
Advertisement
ಯಾರ‍್ಯಾರು ಫೇಸ್‍ಬುಕ್ ಲೈವ್ ಮಾಡಿ ಜನರನ್ನು ಕರೆಸಿದ್ದಾರೆ ಅನ್ನೊ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಸದ್ಯ ಕೆಲವರು ಫೇಸ್‍ಬುಕ್ ಅಕೌಂಟ್ ಡಿಲೀಟ್ ಮಾಡಿದರೆ, ಮತ್ತೆ ಕೆಲವರು ಲೈವ್ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ಪೊಲೀಸರು ಎಲ್ಲರನ್ನೂ ಅರೆಸ್ಟ್ ಮಾಡಿ ಮೊಬೈಲ್ ವಶಕ್ಕೆ ಪಡೆಯಲು ಪ್ಲಾನ್ ಮಾಡಿದ್ದಾರೆ.