ಗಲಭೆಕೋರರಿಂದ ಬಚಾವಾದ ಕುಟುಂಬ- ಗಲಾಟೆಗೂ ಮುನ್ನ ಮನೆ ಖಾಲಿ ಮಾಡಿದ್ದ ಶಾಸಕರು

Public TV
1 Min Read
AKHANDA SRINIVAS MURTHY

– ಪೊಲೀಸ್ ಇಲಾಖೆ ವಿರುದ್ಧ ಸಿಎಂ ಗರಂ

ಬೆಂಗಳೂರು: ಗಲಾಟೆ ಆಗೋದಕ್ಕೂ ಮೊದಲೇ ಪುಲಿಕೇಶಿನಗರದ ಮನೆ ಖಾಲಿ ಮಾಡಿರುವುದರಿಂದ ಶಾಸಕರು ಅಖಂಡ ಶ್ರೀನಿವಾಸ ಮೂರ್ತಿ ಭಾರೀ ಅನಾಹುತದಿಂದ ಪಾರಾಗಿದ್ದಾರೆ.

akhanda 3 e1597197751749

ನಿನ್ನೆ ರಾತ್ರಿ ಪೊಲಿಕೇಶಿನಗರದಲ್ಲಿರುವ ಶಾಸಕರ ಮನೆ ಮತ್ತು ಕಚೇರಿಗೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ. ಪರಿಣಾಮ ಶಾಸಕರ 3 ಅಂತಸ್ತಿನ ಮನೆ ಸಮಪೂರ್ಣ ಸುಟ್ಟು ಕರಕಲಾಗಿದೆ. ಆದರೆ ಗಲಾಟೆ ಆರಂಭಕ್ಕೂ ಮೊದಲೇ ಶಾಸಕರ ಕುಟುಂಬ ಏರಿಯಾ ಬಿಟ್ಟಿತ್ತು. ಇಲ್ಲವಾದಲ್ಲಿ ಮನೆಯಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಿ ಗಲಭರಕೋರರ ಕ್ರೋಧಾಗ್ನಿಗೆ ಬಲಿಯಾಗಬೇಕಿತ್ತು. ಇದನ್ನೂ ಓದಿ: ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್

akhanda 1 e1597197716399

ಇತ್ತ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ಗಲಭೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರಿಂದ ಮುಖ್ಯಮಂತ್ರಿಗಳು ಗಲಭೆ ಕುರಿತ ವರದಿ ತರಿಸಿಕೊಂಡಿದ್ದಾರೆ. ಗಲಭೆಗೆ ಕಾರಣ, ಕಾರಣಕರ್ತರು, ಕೈಗೊಂಡ ಭದ್ರತೆ, ಕಾನೂನು ಸುವ್ಯವಸ್ಥೆ ಬಗ್ಗೆ ವರದಿ ನೀಡಿ ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ಕಾವಲ್‌ ಭೈರಸಂದ್ರ ಉದ್ವಿಗ್ನ – ಪಕ್ಕಾ ಪ್ಲಾನ್ ಮಾಡಿ ವಿಕೃತಿ ಮೆರೆದ ಪುಂಡರು

CM BSY 1 1

ಪೊಲೀಸರು ತಕ್ಷಣ ಗಲಭೆ ನಿಯಂತ್ರಣ ಮಾಡದ ಹಿನ್ನೆಲೆಯಲ್ಲಿ ಇಲಾಖೆ ವಿರುದ್ಧ ಸಿಎಂ ಆಗಿದ್ದಾರೆ. ಗಲಭೆ ತುಂಬಾ ಹೊತ್ತು ನಡೆಯಲು ಬಿಟ್ಟು ಏನ್ಮಾಡ್ತಿದ್ರಿ?. ಸಾರ್ವಜನಿಕರ ವಾಹನಗಳು, ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ಕಿಡಿಗೇಡಿಗಳ ದಾಂಧಲೆಯನ್ನು ಆರಂಭದಲ್ಲೇ ತಡೆಯಲಿಲ್ಲ ಯಾಕೆಂದು ಪೊಲೀಸರನ್ನು ಸಿಎಂ ತರಾಟೆ ತೆಗೆದುಕೊಂಡಿದ್ದಾರೆ.

kaval byrasandra Attack Akhanda Srinivas Murthy 1

ಇದು ಪೂರ್ವನಿಯೋಜಿತ ಕೃತ್ಯವಾದರೂ ಮೋದಲೇ ಯಾಕೆ ಪೊಲೀಸ್ ಇಲಾಖೆಗೆ ಗೊತ್ತಾಗಲಿಲ್ಲ ಎಂದು ಸಿಟ್ಟು ಮಾಡಿಕೊಂಡಿರುವ ಸಿಎಂ, ಕಿಡಿಗೇಡಿಗಳ ಶೀಘ್ರ ಪತ್ತೆ ಮತ್ತು ಕಾನೂನು ಕ್ರಮಕ್ಕೆ ಖಡಕ್ ಸೂಚನೆ ನೀಡಿದ್ದಾರೆ.

Share This Article