– ಅಕ್ಟೋಬರ್ ನಲ್ಲಿ ನಡೆದ ಘಟನೆ ಈಗ ಬೆಳಕಿಗೆ
– ಪೋಷಕರ ದೂರಿನಿಂದ ಪ್ರಕರಣ ಪತ್ತೆ
ಮುಂಬೈ: ಸ್ನೇಹಿತೆಯನ್ನು ಕೊಂದು ಮೃತ ದೇಹವನ್ನು ಫ್ಲ್ಯಾಟ್ನ ಗೋಡೆಯಲ್ಲಿ ಮುಚ್ಚಿಟ್ಟ ಆಘಾತಕಾರಿ ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 30 ವರ್ಷದ ಆರೋಪಿ 32 ವರ್ಷದ ಮಹಿಳೆ ಜೊತೆ ಸ್ನೇಹ ಹೊಂದಿದ್ದ. ಮಹಿಳೆ ವಿವಾಹವಾಗು ಎಂದು ಪೀಡಿಸುತ್ತಿದ್ದದ್ದಕ್ಕೆ ಆರೋಪಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ 32 ವರ್ಷದ ಮಹಿಳೆಯ ಅಸ್ಥಿಪಂಜರವನ್ನು ವಂಗಾಂವ್ ಗ್ರಾಮದ ಆರೋಪಿಯ ಫ್ಲ್ಯಾಟ್ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಹಾಗೂ ಮಹಿಳೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದರು. ಅಕ್ಟೋಬರ್ 21 ರಂದು ಮಹಿಳೆ ಕೊನೇಯದಾಗಿ ಆರೋಪಿ ಜೊತೆ ಕಾಣಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಮನೆಯವರು ಈ ಕುರಿತು ಪ್ರಶ್ನಿಸಿದಾಗ ಅವಳು ಗುಜರಾತ್ನ ವಾಪಿಗೆ ಹೋಗಿದ್ದಾಳೆ ಎಂದು ಆರೋಪಿ ತಿಳಿಸಿದ್ದಾನೆ. ಆದರೆ ಫೋನ್ ಕರೆ ಹಾಗೂ ಯಾವುದೇ ರೀತಿಯ ಸಂಪರ್ಕ ಇಲ್ಲದ ಕಾರಣ ಅಂತಿಮವಾಗಿ ಮಹಿಳೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೆರೆಗೆ ಮನೆಗೆ ಹಿಂದಿರುಗಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಪೊಲೀಸರು ಕೊಲೆ ಹಾಗೂ ಇತರೆ ಸಂಬಂಧಿಸಿದ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.