ಗರ್ಭಿಣಿಗೆ ತುಂಬ ರೋಮಾಂಚನಕಾರಿ ಪಂದ್ಯ : ಅನುಷ್ಕಾ ಶರ್ಮಾ

Public TV
2 Min Read
rcb anushka

ನವದೆಹಲಿ: ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರಿನಲ್ಲಿ ಗೆದ್ದು ಬೀಗಿತ್ತು.

ಈಗ ಈ ಪಂದ್ಯದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ, ವಾವ್, ಗರ್ಭಿಣಿಗೆ ತುಂಬ ರೋಮಾಂಚನಕಾರಿ ಪಂದ್ಯ. ಎಂಥ ತಂಡವಿದು ಎಂದು ಬರೆದುಕೊಂಡಿದ್ದಾರೆ.

Capture 29

ಸೋಮವಾರ ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 10ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಕೊಹ್ಲಿ ಪಡೆ ಸೂಪರ್ ಓವರಿನಲ್ಲಿ ಗೆದ್ದುಕೊಂಡಿತ್ತು. ಈ ಮೂಲಕ ಐಪಿಎಲ್-2020ಯಲ್ಲಿ ಬೆಂಗಳೂರು ತಂಡ ಎರಡನೇ ಗೆಲುವನ್ನು ದಾಖಲಸಿದೆ.

kohli chahal abd

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡಕ್ಕೆ ಆರಂಭಿಕರಾದ ಪಡಿಕಲ್ (54 ರನ್, 40 ಎಸೆತ, 5 ಫೋರ್ 2 ಸಿಕ್ಸರ್) ಮತ್ತು ಫಿಂಚ್ (52 ರನ್, 35 ಎಸೆತ, 7 ಫೋರ್, 1 ಸಿಕ್ಸ್) ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಇವರಿಬ್ಬರು ಅರ್ಧಶತಕ ಸಿಡಿಸಿ ತಂಡ ದೊಡ್ಡ ಮೊತ್ತ ಕಲೆಹಾಕುಲು ಭದ್ರಬುನಾದಿ ಹಾಕಿಕೊಟ್ಟರು. ಇವರ ನಂತರ ಕೊನೆಯಲ್ಲಿ ಒಂದಾದ ಎಬಿಡಿ ವಿಲಿಯರ್ಸ್ (55 ರನ್, 24 ಎಸೆತ, 4ಫೋರ್, 4 ಸಿಕ್ಸ್) ಮತ್ತು ಶಿವಮ್ ದುಬೆ ಸಿಕ್ಸ್ ಫೋರುಗಳ ಸುರಿಮಳೆಗೈದು ಬೆಂಗಳೂರು ತಂಡವನ್ನು 200ರ ಗಡಿ ದಾಟಿಸಿದರು.

rcb 2

ಆರ್‌ಸಿಬಿ ನೀಡಿದ 202 ರನ್‍ಗಳ ಗುರಿಯನ್ನು ಬೆನ್ನತ್ತಿದ್ದ ಮುಂಬೈ ತಂಡ ಆರಂಭಕವಾಗಿ ಎಡವಿತ್ತು. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತ್ತು. ಆದರೆ ಈ ನಡುವೆ ಕ್ರೀಸಿಗೆ ಕಚ್ಚಿಕೊಂಡಿದ್ದ ಇಶಾನ್ ಕಿಶಾನ್ (99 ರನ್, 58 ಎಸೆತ, 2 ಫೋರ್, 9 ಸಿಕ್ಸ್) ಉತ್ತಮವಾಗಿ ಆಡಿಕೊಂಡು ಬರುತ್ತಿದ್ದರು. ಇವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ಕೀರನ್ ಪೋಲಾರ್ಡ್ (60 ರನ್, 24 ಎಸೆತ, 3 ಫೋರ್, 5 ಸಿಕ್ಸ್) ಅವರು ಉತ್ತಮ ಸಾಥ್ ನೀಡಿದರು. ಸೋಲಿನತ್ತ ವಾಲಿದ್ದ ಮುಂಬೈ ತಂಡ ಇವರಿಬ್ಬರ ಉತ್ತಮ ಬ್ಯಾಟಿಂಗ್‍ನಿಂದ ಟೈ ಮಾಡಿಕೊಂಡಿತ್ತು.

EjA6E8zVkAAbdKa

ಪಂದ್ಯ ಟೈ ಆದ ಕಾರಣ ಸೂಪರ್ ಓವರ ಜಾರಿಗೆ ಬಂದಿತ್ತು. ಅಂತೆಯೇ ಮುಂಬೈ ಪರವಾಗಿ ಪೋಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‍ಗೆ ಬಂದರು. ಆದರೆ ಆರ್‍ಸಿಬಿ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ಸೈನಿ ಮುಂಬೈ ತಂಡವನ್ನು ಏಳು ರನ್ ಒಳಗೆ ಕಟ್ಟಿಹಾಕಿದ್ದರು. ಇದರನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಅನುಭವಿ ಆಟಗಾರರಾದ ವಿಲಿಯರ್ಸ್ ಮತ್ತು ಕೊಹ್ಲಿ ಸುಲಭವಾಗಿ ಬೆಂಗಳೂರು ತಂಡಕ್ಕೆ ಜಯವನ್ನು ತಂದು ಕೊಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *