ಗಮನಿಸಿ, ವಾಟ್ಸಪ್‍ನಲ್ಲಿ ಹರಿದಾಡುತ್ತಿರುವ ವಿಡಿಯೋ ಬೆಂಗಳೂರಿನದ್ದಲ್ಲ

Public TV
1 Min Read
Kolar covid Video 1

ಬೆಂಗಳೂರು: “ಸಲೂನ್ ಅಂಗಡಿಯಲ್ಲಿ ಕಟ್ಟಿಂಗ್ ಮಾಡಿಸಿದ ವ್ಯಕ್ತಿಗೆ ಕೊರೊನಾ ಬಂದಿದೆ. ಬೆಂಗಳೂರಿನ ವಿವೇಕಾನಗರದ ಈ ಸಲೂನ್ ಅಂಗಡಿಯಲ್ಲಿ ಕಟ್ಟಿಂಗ್ ಮಾಡಿಸಿದ ವ್ಯಕ್ತಿಗಳು ಕೂಡಲೇ ಆಸ್ಪತ್ರೆಗೆ ತೆರಳಿ”.

ಈ ರೀತಿಯ ಸಾಲನ್ನು ಬರೆದಿರುವ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ವೈರಲ್ ಆಗಿದೆ. ಆದರೆ ಇದು ಬೆಂಗಳೂರಿನ ವಿಡಿಯೋವಲ್ಲ.

Kolar covid Video 2

ವಿಡಿಯೋದಲ್ಲಿರುವ ವಿಚಾರವನ್ನು ಖಚಿತ ಪಡಿಸಲು ಬಿಬಿಎಪಿಯನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ವಿಜಯೇಂದ್ರ, ಈ ವಿಡಿಯೋ ನಮ್ಮ ಬಿಬಿಎಂಪಿ ವ್ಯಾಪ್ತಿಯದ್ದು ಅಲ್ಲ. ಯಾರೋ ಜನರನ್ನ ಹೆದರಿಸಲು ಈ ರೀತಿ ಮಾಡಿದ್ದಾರೆ. ನಮ್ಮ ಅಧಿಕಾರಿಗಳು ಯಾರು ಈ ರೀತಿಯಾಗಿ ಅನೌನ್ಸ್ ಮಾಡೋದಿಲ್ಲ. ಈ ರೀತಿ ಮಾಡಿ ಜನರಿಗೆ ಭಯ ಹುಟ್ಟಿಸಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇದು ಮೂಲತಃ ಕೋಲಾರದ ಬಂಗಾರಪೇಟೆಯ ವಿಡಿಯೋ. ಅಲ್ಲಿ ಸಲೂನ್ ಶಾಪ್‍ಗೆ ತೆರಳಿದ ವ್ಯಕ್ತಿಗೆ ಪಾಸಿಟಿವ್ ಬಂದಿತ್ತು. ಈ ವೇಳೆ ರಾತ್ರಿ ಮೈಕ್ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ.

Corona 1 10

ವಿಡಿಯೋದಲ್ಲಿ ಏನಿದೆ?
ಮೇ 31ರಂದು ಸೂಪರ್ ಜೆಂಟ್ಸ್ ಸಲೂನ್ ಅಂಗಡಿಯಲ್ಲಿ ಶೇವಿಂಗ್ ಮತ್ತು ಕಟ್ಟಿಂಗ್ ಮಾಡಿಸಿದ ವ್ಯಕ್ತಿಗೆ ಕೊರೊನಾ ಬಂದಿದೆ. ಹೀಗಾಗಿ ಈ ದಿನ ಯಾರೆಲ್ಲ ಶೇವಿಂಗ್ ಮತ್ತು ಕಟ್ಟಿಂಗ್ ಮಾಡಿದ್ದಾರೋ ಅವರೆಲ್ಲ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕೆಂದು ಅಧಿಕಾರಿಗಳು ಮನವಿ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *