ನವದೆಹಲಿ: ಚಾಲನಾ ಪರವಾನಿಗೆ(ಡಿಎಲ್) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ ಅದರ ಸಿಂಧುತ್ವ ಅವಧಿಯನ್ನು ಮಾರ್ಚ್ 2021ರವರೆಗೂ ವಿಸ್ತರಿಸಲು ಸಾರಿಗೆ ಸಚಿವಾಲಯ ಮುಂದಾಗಿದೆ.
Advertisement
ಕೊರೊನಾ ಮಹಾಮಾರಿ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗದುಕೊಂಡಿರುವುದಾಗಿ ವರದಿಯಾಗಿದೆ. ಈಗಾಗಲೇ ಕೇಂದ್ರ ಸಾರಿಗೆ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ಹೊರಡಿಸಿದೆ.
Advertisement
2020ರ ಮಾರ್ಚ್‍ನಿಂದ ಸತತವಾಗಿ 4ನೇ ಬಾರಿ ವಾಹನಗಳ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಿಸುತ್ತಿರುವ ಕೇಂದ್ರ ಸಾರಿಗೆ ಸಚಿವಾಲಯ, ಇದೀಗ ಮತ್ತೆ 2021ರ ಮಾರ್ಚ್ ವರೆಗೆ ಕಾಲಾವಕಾಶ ಕೊಟ್ಟಿರುವುದರಿಂದ ಜನಸಾಮಾನ್ಯರಿಗೆ ವರದಾನವಾಗಿದೆ.
Advertisement
Advertisement
ಚಾಲನಾ ಪರವಾನಿಗೆ(ಡಿಎಲ್), ನೋಂದಣಿ ಪ್ರಮಾಣ ಪತ್ರ(ಆರ್‍ಸಿ), ಪರ್ಮಿಟ್‍ಗಳು, ಫಿಟ್ನೆಸ್ ಸರ್ಟಿಫಿಕೆಟ್‍ಗಳೊಂದಿಗೆ ವಾಹನ ಕಾಯ್ದೆ ಮತ್ತು ಕೇಂದ್ರ ವಾಹನ ನಿಯಮಕ್ಕೆ ಸಂಬಂಧಿಸಿದ ದಾಖಲೆಗಳ ಅವಧಿಯನ್ನು ವಿಸ್ತರಿಸುವುದಾಗಿ ಕೇಂದ್ರ ಸಾರಿಗೆ ಸಚಿವಾಲಯ ಭಾನುವಾರ ಪ್ರಕಟಣೆ ಹೊರಡಿಸಿದೆ. ಇದರೊಂದಿಗೆ 2020ರ ಫೆಬ್ರುವರಿ 1 ರಿಂದ ಮುಕ್ತಾಯಗೊಂಡಿರುವ ಸರ್ಟಿಫಿಕೆಟ್‍ಗಳಿಗೆ 2021ರ ಮಾರ್ಚ್‍ವರೆಗೂ ಅವಕಾಶ ಕಲ್ಪಿಸಿರುವುದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಿಲೀಫ್ ಸಿಕ್ಕಂತಾಗಿದೆ.