ಚೆನ್ನೈ: ದಿವಂಗತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥವಾಗಿ ಚಾಕ್ಲೇಟ್ ಪ್ರತಿಮೆ ನಿರ್ಮಾಣವಾಗಿದೆ.
ಹೌದು. ಪುದುಚೇರಿಯ ಅಂಗಡಿ ಮಾಲೀಕರೊಬ್ಬರು ಚಾಕ್ಲೇಟ್ ನಲ್ಲಿ ಗಾಯಕರ ಪ್ರತಿಮೆ ನಿರ್ಮಿಸಿದ್ದು, ಆಕರ್ಷಣೀಯವಾಗಿದೆ. 5.8 ಅಡಿ ಎತ್ತರ 339 ಕೆ.ಜಿ. ತೂಕದ ಎಸ್‍ಪಿಬಿ ಚಾಕ್ಲೇಟ್ ಪ್ರತಿಮೆ ಪುದುಚೇರಿಯ ಮಿಷನ್ ಸ್ಟ್ರೀಟ್‍ನಲ್ಲಿರುವ ಅಂಗಡಿಯಲ್ಲಿ ತಯಾರಿಸಿ ಪ್ರದರ್ಶಿಸಲಾಗಿದೆ. ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕ್ಲೇಟ್ ನಿಂದಲೇ ರೆಡಿ ಮಾಡಲಾಗಿದೆ.
Advertisement
Advertisement
ಕ್ರಿಸ್‍ಮಸ್ ಮತ್ತು ಹೊಸ ವರ್ಷ ಹಿನ್ನೆಲೆಯಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲೀಕರು ಈ ಪ್ರತಿಮೆಯ ಪ್ರದರ್ಶನ ಏರ್ಪಡಿಸಿದ್ದಾರೆ. ಇದನ್ನು ಜನವರಿ 3 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ ಎಂದು ಪ್ರತಿಮೆಯನ್ನು ತಯಾರಿಸಿದ ರಾಜೇಂದ್ರನ್ ಹೇಳಿದ್ದಾರೆ.
Advertisement
ಅಂಗಡಿಯಲ್ಲಿ ಗಣ್ಯರ ಪ್ರತಿಮೆಗಳನ್ನು ಪ್ರದರ್ಶನಕ್ಕೆ ಇಡುವುದು ಇದೇ ಮೊದಲಲ್ಲ. ಈ ಹಿಂದೆ ಎ.ಪಿ.ಜೆ ಅಬ್ದುಲ್ ಕಲಾಂ, ನಟ ರಜನಿಕಾಂತ್ ಹಾಗೂ ಕ್ರಿಕೆಟಿಗರ ಚಾಕ್ಲೇಟ್ ಪ್ರತಿಮೆಗಳನ್ನು ಕೂಡ ತಯಾರಿಸಿ ಪ್ರದರ್ಶಿಸಲಾಗಿತ್ತು.