-ಮಂಡ್ಯದಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ
ಮಂಡ್ಯ: ಕೇಂದ್ರ ಸಚಿವೆಯಾದ ಬಳಿಕ ಮಂಡ್ಯಕ್ಕೆ ಮೊದಲ ಬಾರಿಗೆ ಆಗಮಿಸಿದ ಸಚಿವೆ ಶೋಭಾ ಕರಂದ್ಲಾಜೆ ಸಕ್ಕರೆ ನಾಡಿನಲ್ಲಿ ಇಂದು ಜನಾಶೀರ್ವಾದ ಯಾತ್ರೆ ಆರಂಭಿದ್ದಾರೆ. ಈ ವೇಳೆ ರೈತ ಮಹಿಳೆಯರೊಂದಿಗೆ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ.
Advertisement
ಪ್ರಧಾನಿ ಮೋದಿ ಆಶಯದಂತೆ ಕೇಂದ್ರ ಸಚಿವರುಗಳು ದೇಶಾದ್ಯಂತ ಜನಾಶೀರ್ವಾದ ಯಾತ್ರೆ ಆರಂಭಿಸಿದ್ದು, ಮಂಡ್ಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದ್ದಾರೆ. ಶೋಭಾಕ ರಂದ್ಲಾಜೆಗೆ ಮದ್ದೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿ, ಬೈಕ್ ರ‍್ಯಾಲಿ ನಡೆಸಿದ್ಧಾರೆ. ಇದನ್ನೂ ಓದಿ: ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್
Advertisement
Advertisement
ಮಂಡ್ಯಗೆ ಆಗಮಿಸಿದ ಸಚಿವೆ ಹೊನಗಾನಹಳ್ಳಿಗೆ ಭೇಟಿ ಕೊಟ್ಟು ರೈತ ಮಹಿಳೆಯರೊಂದಿಗೆ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ. ಅಲ್ಲದೇ ನಾಟಿ ಯಂತ್ರೋಪಕರಣಕ್ಕೆ ಚಾಲನೆ ನೀಡಿ ನಾಟಿ ಯಂತ್ರದ ಮೇಲೆ ಕುಳಿತು ಸಂತಸಪಟ್ಟಿದ್ದಾರೆ. ಸಚಿವ ನಾರಾಯಣಗೌಡ ನಾಟಿ ಯಂತ್ರ ಚಲಾಯಿಸಿದ್ರು, ಬಳಿಕ ರೈತರೊಂದಿಗೆ ಉಪಹಾರ ಸೇವಿಸಿ ರೈತರ ಕಷ್ಟಗಳನ್ನ ಆಲಿಸಿದ್ದಾರೆ. ನಾಟಿ ಮಾಡಿದ ಬಳಿಕ ಸಾತನೂರು ಗ್ರಾಮದ ಆಲೆಮನೆಯೊಂದಕ್ಕೆ ಭೇಟಿ ಕೊಟ್ಟ ಸಚಿವೆ ಸ್ವತಃ ಗಾಣಕ್ಕೆ ಕಬ್ಬನ್ನ ಹಾಕಿ ಕಬ್ಬು ನುರಿದು, ಸಾವಯವ ಬೆಲ್ಲದ ತಯಾರಿ ಬಗ್ಗೆ ರೈತರಿಂದ ಮಾಹಿತಿ ಪಡೆದು ಮಂಡ್ಯ ಬೆಲ್ಲದ ಸಿಹಿ ಸವಿದಿದ್ದಾರೆ.
Advertisement
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈಗೆ ಸಿಗದೆ ದ್ರಾಕ್ಷಿ ಹುಳಿ ಅಂತಾರೆ, ಸಿದ್ದರಾಮಯ್ಯಗೆ ಅಧಿಕಾರವಿಲ್ಲ, ಅದಕ್ಕಾಗಿಯೆ ಬೊಮ್ಮಾಯಿ ಸರ್ಕಾರ ಹೆಚ್ಚುದಿನ ಉಳಿಯಲ್ಲ ಅಂತಿದ್ದಾರೆ. ನಮ್ಮ ಸರ್ಕಾರ ಇರುತ್ತೆ, ಒಳ್ಳೆಯ ಕೆಲಸ ಮಾಡುತ್ತೆ ಎಂದು ಮಾಜಿ ಸಿಎಂ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ. ನಮ್ಮ ಹಾಗೂ ರಾಜ್ಯದ ನಿಲುವು ಮೇಕೆದಾಟು ಯೋಜನೆ ಬಗ್ಗೆ ಸ್ಪಷ್ಟ ನಿಲುವಿದೆ. ಈ ಯೋಜನೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡೋದು ತಪ್ಪಿಸಲು ಸಾಧ್ಯವಿಲ್ಲ. ನ್ಯಾಯಾಧೀಕರಣದ ಸೂಚನೆಯಂತೆ ತಮಿಳುನಾಡಿಗೆ ನಿಗದಿಯಾಗರುವ ನೀರು ತಪ್ಪಲ್ಲ ಎಂದರು.
ಸಕ್ಕರೆ ನಾಡಿಗೆ ಬಂದ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ ಮೂಲಕ ರೈತರ ಸಮಸ್ಯೆಯಾಲಿಸುವ ಪ್ರಯತ್ನ ಮಾಡಿದ್ದಾರೆ. ಆದರೇ ಆಡಳಿತರೂಢ ಬಿಜೆಪಿ ಪಕ್ಷದ ಕಾರ್ಯಕರ್ತರು ಸಚಿವರನ್ನ ಸ್ವಾಗತ ಕೋರುವ ಭರದಲ್ಲಿ ಕೋವಿಡ್ ನಿಯಮವನ್ನೆ ಗಾಳಿಗೆ ತೂರಿದ್ದು ವಿಪರ್ಯಾಸವೆ ಸರಿ.