– ಕೊಠಡಿ ಸಾಲದಿದ್ದಾಗ ತಮ್ಮ ಕೊಠಡಿಯನ್ನೇ ಬಿಟ್ಟುಕೊಟ್ಟಿದ್ದರು
ತುಮಕೂರು: ಇಂದು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಎರಡನೇ ವರ್ಷದ ಪುಣ್ಯ ಸ್ಮರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರು ಶಿವಕುಮಾರ ಸ್ವಾಮೀಜಿಗಳಿದ್ದ ದಿನಗಳನ್ನು ಮೆಲುಕು ಹಾಕಿಕೊಂಡರು.
ಈ ಸಂಬಂಧ ಸಿದ್ದಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಎರಡು ವರ್ಷದ ಹಿಂದೆ ಅವರು ದರ್ಶನಾಹಾರವಾಗಿದ್ದರು. ಇದೀಗ ಅವರ ಸ್ಮರಣೆಯೇ ದರ್ಶನಾಹಾರವಾಗಿದೆ. ಸ್ವಾಮೀಜಿ ಸೇವೆ, ದಾಸೋಹಕ್ಕೆ ಜೀವವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಆತ್ಮನಿರ್ಬರ್ ಅನ್ನುವುದನ್ನು ಬಸವಣ್ಣನವರು ಕಲಿಸಿದ್ದಾರೆ. ಶ್ರೀಗಳು ಕಾಯಕವೇ ಕೈಲಾಸ ಎಂಬ ಭಾವನೆಯೊಂದಿಗೆ ಜೀವನ ಸಾರ್ಥಕತೆ ಮಾಡಿಕೊಂಡವರು. ಎಷ್ಟೇ ಮಕ್ಕಳು ಬಂದರೂ ಆಶ್ರಯ ನೀಡುತ್ತಿದ್ದರು. ಒಂದು ಸಾರಿ ಕೊಠಡಿ ಸಾಲದಿದ್ದಾಗ ತಮ್ಮ ಕೊಠಡಿಯನ್ನು ಬಿಟ್ಟುಕೊಟ್ಟರು. ಗದ್ದುಗೆಯಲ್ಲಿ ಕುಳಿತಾಗ ಅವರ ಎದುರು ಮಕ್ಕಳು ಓಡಾಡಿದ್ರೆ ಖುಷಿಯಾಗುತ್ತಿದ್ದರು ಎಂದು ಕಾಯಕ ಯೋಗಿಯನ್ನು ನೆನಪು ಮಾಡಿಕೊಂಡರು.
ಸರಳವಾಗಿ ಆಚರಿಸಬೇಕಾಗಿತ್ತು. ಸಿಎಂ ಅವರನ್ನು ಬರುವಂತೆ ಮನವಿ ಮಾಡಿದ್ವಿ, ಅಂತೆಯೇ ಸಿಎಂ ಒಪ್ಪಿಕೊಂಡರು, ಅವರು ಶ್ರೀಗಳ ಆಂತರಂಗದ ಶಿಷ್ಯರು. ವೀರಾಪುರ ಗ್ರಾಮದಲ್ಲಿ ವಿಶೇಷವಾಗಿ ಅಭಿವೃದ್ಧಿ ಮಾಡುತ್ತಿದ್ದು, ಸಿಎಂ 80 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.