ಗದಗ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜಿಲ್ಲೆಯಲ್ಲಿ ವೈದ್ಯಕೀಯ ಇಲಾಖೆ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೂ ತನ್ನ ಕಬಂದಬಾಹು ಚಾಚುತ್ತಿದೆ. ಜಿಲ್ಲೆನಲ್ಲಿ ಇಂದು ನಾಲ್ಕು ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಇಂದಿನ ಪ್ರಕರದಲ್ಲಿ ವೈದ್ಯ, ಲ್ಯಾಬ್ ಟೆಕ್ನಿಷಿಯನ್ ಹಾಗೂ ಡಯಾಲಿಸಿಸ್ ರೋಗಿಗಳಿಗೂ ಸೋಂಕು ದೃಢವಾಗಿದೆ. ಜಿಮ್ಸ್ ಆಸ್ಪತ್ರೆಯ ಕೋವಿಡ್-19 ವಿಭಾಗದಲ್ಲಿ ಕೆಲಸ ಮಾಡಿದ ಅರ್ಥೊಪಿಡಿಕ್ ವೈದ್ಯ ಹಾಗೂ ಡಯಾಲಿಸಿಸ್ ಲ್ಯಾಬ್ ಟೆಕ್ನಿಷಿಯನ್ ಸೇರಿ ಡಯಾಲಿಸಿಸ್ ರೋಗಿಗಳಿಗೂ ತಗುಲಿದೆ. ಇದರಿಂದ ಜಿಲ್ಲೆಯ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.
Advertisement
Advertisement
29 ವರ್ಷದ ರೋಗಿ-5014, 28 ವರ್ಷದ ರೋಗಿ-5015, 32 ವರ್ಷದ ರೋಗಿ-5016, ಇನ್ನು 29 ವರ್ಷದ ರೋಗಿ-5017 ವ್ಯಕ್ತಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ರೋಗಿ-4079 ರ ವ್ಯಕ್ತಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಮೇ 26 ರಂದು ಡಯಾಲಿಸಿಸ್ ಮಾಡಿಕೊಂಡು ಕ್ಯಾನ್ಸರ್ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಿದ ವೇಳೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವಾಗ ದೃಢವಾಗಿದೆ.
Advertisement
ರೋಗಿ-4079 ರ ವ್ಯಕ್ತಿ ಡಯಾಲಿಸಿಸ್ ಮಾಡಿಸಿದ ನಂತರ ರೋಗಿ-5015, ಹಾಗೂ ರೋಗಿ-5016 ಎಂಬುವರು ಸಹ ಡಯಾಲಿಸಿಸ್ ಮಾಡಿಸಿಕೊಂಡಿದಕ್ಕೆ ಇವರಿಗೆ ಬಂದಿದೆ ಎನ್ನಲಾಗಿದೆ. ಈ ಮೂಲಕ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಹಾಗೂ ಲಕ್ಕುಂಡಿ ಗ್ರಾಮದ ವ್ಯಕ್ತಿ ಇವರಾಗಿರುವುದರಿಂದ ಗ್ರಾಮೀಣ ಪ್ರದೇಶಕ್ಕೂ ನಂಟು ಬೆಳೆಸಿದೆ. ಆದ್ರೆ ಈ ನಾಲ್ಕು ಜನ್ರಿಗೂ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
Advertisement
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41 ಕ್ಕೆ ಏರಿದ್ದು ಈ ಪೈಕಿ ಇಬ್ಬರು ಸಾವನಪ್ಪಿದ್ದಾರೆ. 26 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು 13 ಸೋಂಕಿತರು ಜಿಮ್ಸ್ ಆಸ್ಪತ್ರೆನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.