ಶಿವಮೊಗ್ಗ: ಗಣಹೋಮದ ವೇಳೆ ಅಗ್ನಿಯಲ್ಲಿ ಗಣೇಶನ ಬಿಂಬ ಕಂಡು ಭಕ್ತರು ಕ್ಷಣಕಾಲ ಪುಳಕಿತರಾದ ಘಟನೆ ಶುಕ್ರವಾರ ಶಿವಮೊಗ್ಗದಲ್ಲಿ ನಡೆದಿದೆ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ನೂತನ ದೈವಜ್ಞ ಸಭಾಭವನದ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಗಣಹೋಮ ಆಯೋಜಿಸಲಾಗಿತ್ತು. ಈ ವೇಳೆ ಹೋಮದ ಅಗ್ನಿ ಕುಂಡದಲ್ಲಿ ಗಣೇಶನ ಬಿಂಬ ಪ್ರತ್ಯಕ್ಷವಾಗಿದೆ.
ಈ ಬಿಂಬವನ್ನು ಸ್ಥಳದಲ್ಲಿದ್ದ ಭಕ್ತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಸ್ಥಳದಲ್ಲಿದ್ದ ಭಕ್ತರು ಈ ದೃಶ್ಯ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.