ಭೋಪಾಲ್: ಕಾರ್ಮಿಕರೊಬ್ಬನಿಗೆ 35 ಲಕ್ಷ ಮೌಲ್ಯದ ವಜ್ರಗಳು ಸಿಕ್ಕಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರ ಗಣಿಯೊಂದರಲ್ಲಿ ನಡೆದಿದೆ.
ಪನ್ನಾ ವಜ್ರ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಬಲ್ ಎಂಬವರಿಗೆ ಅಂದಾಜು 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಸಿಕ್ಕಿವೆ. 7.5 ಕ್ಯಾರೆಟ್ ನಿವ್ವಳ ತೂಕದ ಮೂರು ವಜ್ರಗಳನ್ನು ಗಣಿಯಲ್ಲಿ ಸಿಕ್ಕಿವೆ ಎಂದು ಪನ್ನಾ ಜಿಲ್ಲೆಯ ವಜ್ರಾಧಿಕಾರಿ ಆರ್.ಕೆ.ಪಾಂಡೆ ತಿಳಿಸಿದ್ದಾರೆ.
Advertisement
Advertisement
ಈ ವಜ್ರಗಳನ್ನು ಕಾರ್ಮಿಕರ ಸುಬಲ್ ಜಿಲ್ಲಾ ವಜ್ರದ ಕಚೇರಿಗೆ ನೀಡಿದ್ದಾನೆ. ಅವುಗಳನ್ನು ಸರ್ಕಾರದ ನಿಯಮಗಳ ಪ್ರಕಾರ ಹರಾಜು ಮಾಡಲಾಗುತ್ತದೆ ಎಂದು ಶ್ರೀ ಪಾಂಡೆ ಹೇಳಿದ್ದಾರೆ. ಜೊತೆಗೆ ಇದರ ಮಾರಾಟದಿಂದ ಬಂದ ಹಣದಲ್ಲಿ ಶೇಕಡಾ 12 ರಷ್ಟು ತೆರಿಗೆಯನ್ನು ಕಡಿತಗೊಳಿಸಿದ ನಂತರ, ಉಳಿದ 88 ಶೇಕಡಾ ಮಾರಾಟದ ಆದಾಯವನ್ನು ಸುಬಲ್ ಅವರಿಗೆ ನೀಡುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಬುಂದೇಲ್‍ಖಂಡ್ ಪ್ರದೇಶದ ಪನ್ನಾದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ 10.69 ಕ್ಯಾರೆಟ್ ವಜ್ರ ಸಿಕ್ಕಿತ್ತು.