– ರಾಜಾಸೀಟ್ ಉದ್ಯಾನವನ ಸ್ವಚ್ಛತೆ
ಮಡಿಕೇರಿ: ದೇಶ-ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುವ ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್‍ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮಕ್ಕಳು ಸ್ವಚ್ಛತಾ ಕಾರ್ಯವನ್ನು ಮಾಡಿ ಎಲ್ಲರ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
ಈ ಪ್ರವಾಸಿತಾಣಕ್ಕೆ ಬರುವ ಪ್ರವಾಸಿಗರು ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದನ್ನು ಕಂಡ ಮಕ್ಕಳು ಇಂದು ರಾಜಾಸೀಟ್ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ. ಮಡಿಕೇರಿ ನಗರದ ಕಲಾ ನಗರದದ ಮಕ್ಕಳು ಇಂದು 72ನೇ ಗಣರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.
Advertisement
Advertisement
ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುಮಾರು 10 ಮಕ್ಕಳು ಸೇರಿ ರಾಜಾಸೀಟ್‍ಗೆ ತೆರಳಿದ್ದಾರೆ. ಉದ್ಯಾನವನದೊಳಗೆ ಹೋಗುವಾಗ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಕಂಡ ಮಕ್ಕಳು ಗಣರಾಜ್ಯೋತ್ಸವದ ದಿನ ಈ ಕಾರ್ಯಗಳನ್ನು ನಾವೇ ಮಾಡಬಹುದು ಎಂದು ಮಕ್ಕಳೇ ಮಾತಾನಾಡಿಕೊಂಡು.
Advertisement
ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ಅಲ್ಲದೇ ಬರುವ ಪ್ರವಾಸಿಗರಿಗೆ ಕಸಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ ಹೋಗಿ ಕ್ಲೀನ್ ಕೊಡಗು ಎಂಬ ಭಾವನೆಯಿಂದ ಜಿಲ್ಲೆಗೆ ಅಗಮಿಸಿ ಎಂದು ಮನವಿ ಮಾಡಿದ್ದಾರೆ. ಮಕ್ಕಳ ಈ ಕಾರ್ಯಕ್ಕೆ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.