– ಸತ್ಯ ಅರಿವಾದಾಗ ಕ್ಷಮೆ ಕೇಳಿದ್ರು
ಭೋಪಾಲ್: ಗಡ್ಡ ಬಿಟ್ಟಿದ್ದರಿಂದ ಹಿಂದೂ ವಕೀಲನಿಗೆ ಚೆನ್ನಾಗಿ ಥಳಿಸಿ ಬಳಿಕ ಕ್ಷಮೆ ಕೇಳಿದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಬೆತುಲ್ ಎಂಬಲ್ಲಿ ನಡೆದಿದೆ.
ಏನಿದು ಪ್ರಕರಣ?:
ಘಟನೆಯ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೆ ಬಂದಿರಲಿಲ್ಲ. ಆದರೆ ಮಾರ್ಚ್ 23ರಂದು ವಕೀಲ ದೀಪಕ್ ಬಂಡೇಲೆ ಚಿಕಿತ್ಸೆಗೆಂದು ಆಸ್ಪತ್ರೆಯತ್ತ ತೆರಳಿದ್ದಾರೆ. ಇದೇ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರು ಅವರನ್ನು ಅಡ್ಡಗಟ್ಟಿದ್ದಾರೆ.
Advertisement
ಈ ವೇಳೆ ದೀಪಕ್, ನನಗೆ ವಿಪರೀತ ರಕ್ತದೊತ್ತಡ ಹಾಗೂ ಡಯಾಬಿಟಿಸ್ ನಿಂದ ಬಳಲುತ್ತಿದ್ದೇನೆ. ಹೀಗಾಗಿ ನಾನು ಪ್ರತಿ ದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕಾಗುತ್ತದೆ ಎಂದು ವಿವರಣೆ ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ಮಾತ್ರ ದೀಪಕ್ ಮಾತನ್ನು ಕೇಳದೆ ಹಿಗ್ಗಾಮುಗ್ಗ ಥಳಿಸಲು ಆರಂಭಿಸಿದ್ದಾರೆ. ಕೊನೆಗೆ ತಾನೊಬ್ಬ ವಕೀಲ ಅಲ್ಲದೆ ಈ ಕುರಿತು ನಿಮ್ಮ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಹೇಳಿದ ಬಳಿಕ ಪೊಲೀಸರು ಥಳಿಸೋದನ್ನು ನಿಲ್ಲಿಸಿದ್ದಾರೆ. ಕೂಡಲೇ ದೀಪಕ್ ತನ್ನ ಅಣ್ಣ ಹಾಗೂ ಗೆಳೆಯರನ್ನು ಸ್ಥಳಕ್ಕೆ ಕರೆದು ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.
Advertisement
Advertisement
ಮರು ದಿನ ಬೆಳಗ್ಗೆ ದೀಪಕ್ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್ ಭಡೋರಿಯಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿವೇಕ ಜೊಹ್ರಿ ಬಳಿ ತೆರಳಿ ದೂರು ನೀಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ, ರಾಜ್ಯ ಮಾನವ ಹಕ್ಕುಗಳ ಆಯೋಗ, ಬಾರ್ ಕೌನ್ಸಿಲ್ ಹಾಗೂ ಇತರ ಉನ್ನತ ಅಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಮಾರ್ಚ್ 23ರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳಿಗಾಗಿ ಆರ್ ಟಿಐ ಅರ್ಜಿಯನ್ನು ಸಲ್ಲಿಸಿದ್ದೇನೆ. ಆದರೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇದೀಗ ಘಟನೆ ನಡೆದು 2 ತಿಂಗಳ ಬಳಿಕ ಪೊಲೀಸರು ದೂರು ಹಿಂಪಡೆದುಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ.
Advertisement
ಪೊಲೀಸ್ ಅಧಿಕಾರಿಯೊಬ್ಬ, ದೀಪಕ್ ನನ್ನು ಮುಸ್ಲಿಂ ಎಂದು ತಪ್ಪಾಗಿ ತಿಳಿದು ಆತನಿಗೆ ಥಳಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ನೀವು ಕೆಲವು ಉನ್ನತ ಅಧಿಕಾರಿಗಳು ನನ್ನ ದೂರನ್ನು ಹೀಮತೆಗೆದುಕೊಂಡರೆ ಘಟನೆಯನ್ನು ಖಂಡಿಸಿ ಕ್ಷಮೆಯಾಚಿಸುವಂತೆ ಹೇಳಿಕೆ ನೀಡಬಹುದು ಎಂದು ಹೇಳಿದ್ದಾರೆ. ಆದರೆ ನನ್ನ ಸ್ನೇಹಿತರು ಶಾಂತಿಯುತವಾಗಿ ಕಾನೂನಾತ್ಮಕವಾಗಿ ಮುಂದುವರಿಯಲಿ ಸಲಹೆ ನೀಡಿದ್ದಾರೆ ಎಂದಿದ್ದಾರೆ.
ನಾವು ಹಲ್ಲೆ ಮಾಡಿದ ಅಧಿಕಾರಿಗಳ ಪರ ಕ್ಷಮೆ ಕೇಳುತ್ತೇವೆ. ಘಟನೆಯಿಂದಾಗಿ ನಾವು ನಿಜವಾಗಲೂ ಮುಜುಗರಕ್ಕೆ ಒಳಗಾಗಿದ್ದೇವೆ. ನೀವು ಓಕೆ ಅಂದರೆ ಥಳಿಸಿದ ಅಧಿಕಾರಿಗಳನ್ನು ನಿಮ್ಮ ಮುಂದೆ ನಿಲ್ಲಿಸಿ ಖುದ್ದಾಗಿ ಕ್ಷಮೆ ಕೇಳುವಂತೆ ಮಾಡುತ್ತೇವೆ. ಪೊಲೀಸರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ ಎಂದು ಬರೆಯಿರಿ. ದಯವಿಟ್ಟು ನಮ್ಮ ಮನವಿಯನ್ನು ಒಪ್ಪಿಕೊಳ್ಳಿ. ನಿಮ್ಮ ಜಾತಿಯಿಂದ ನನಗೆ 50 ಮಂದಿ ಸ್ನೇಹಿತರಿದ್ದಾರೆ ಎಂದು ಇತರ ಪೊಲೀಸ್ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ವಕೀಲ ಆರೋಪಿಸಿದ್ದಾರೆ.
ಈ ಘಟನೆಯಿಂದ ವಕೀಲ ಮತ್ತಷ್ಟು ಚಿಂತಿತರಾಗಿದ್ದು, ಯಾವುದೇ ಕಾರಣಕ್ಕೂ ದೂರು ಹಿಂಪಡೆಯಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಕರಣ ಸಂಬಂಧ ಇದೂವರೆಗೂ ಎಫ್‍ಐಆರ್ ದಾಖಲಾಗಿಲ್ಲ ಎಂದು ಬೇಸರಗೊಂಡಿದ್ದಾರೆ. ಅಲ್ಲದೆ ಪೊಲೀಸ್ ಅಧಿಕಾರಿಗಳು ಕ್ಷಮೆಯಾಚಿಸಿದ ರೀತಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಒಂದು ವೇಳೆ ನಾನು ಮುಸ್ಲಿಮನಾಗಿದ್ದರೂ ಯಾವುದೇ ತಪ್ಪಿಲ್ಲದೆ ಹಲ್ಲೆ ಮಾಡುವ ಅಧಿಕಾರ ಅವರಿಗಿಲ್ಲ ಎಂದು ತಿಳಿಸಿದ್ದಾರೆ.