– ಇದು ಬದಲಾವಣೆಯ ಮೊದಲ ಹಂತ
– ಹಿಂದುತ್ವದ ಪರ ಕೆಲಸ ಮಾಡಿದ್ರೆ ಬೆಂಬಲ
ಬೆಂಗಳೂರು: ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದು ಸ್ಮಾರ್ಟ್ ಆಗಿದ್ದೇನೆ. ಗಡ್ಡ ಬಿಟ್ಟಾಗ ಶಿವಾಜಿ ಆಗಿದ್ದೆ, ಈಗ ಬಸವಣ್ಣ ಆಗಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಿಎಂ ಪದಗ್ರಹಣದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣವಚನ ತೆಗೆದುಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನೂ ಎಂದೂ ಮುಖ್ಯಮಂತ್ರಿ, ಸಚಿವ ಸ್ಥಾನಕ್ಕಾಗಿ ಯಾರ ಮನೆಯ ಬಾಗಿಲು ತಟ್ಟಿಲ್ಲ. ಈ ಹಿಂದೆಯೂ ಇದೇ ಹೇಳಿಕೆಯನ್ನು ಹಲವು ಬಾರಿ ನೀಡಿದ್ದು, ನಾನು ಆಡಿದ ಮಾತುಗಳಿಗೆ ಮುಂದೆಯೂ ಬದ್ಧವಾಗಿರುತ್ತೇನೆ.
Advertisement
Advertisement
ಬೊಮ್ಮಾಯಿ ಅವರು ಭ್ರಷ್ಟಾಚಾರ ಮುಕ್ತ ಮತ್ತು ಹಿಂದುತ್ವ ಪರವಾದ ಕೆಲಸಗಳನ್ನು ಮಾಡಿದ್ರೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಬೊಮ್ಮಾಯಿ ಅವರು ಒಬ್ಬರ ರಬ್ಬರ್ ಸ್ಟ್ಯಾಂಪ್ ಅಂತ ಕೆಲವರು ಹೇಳ್ತಾರೆ. ಆದ್ರೆ ಅದು ಸಾಧ್ಯವಿಲ್ಲ. ಬೊಮ್ಮಾಯಿ ಬಹಳ ಬುದ್ಧಿವಂತರಾಗಿದ್ದು, ಗೃಹ ಸಚಿವರಾಗಿದ್ದಾಗ ಹಲವು ಬಾರಿ ಭೇಟಿಯಾಗಿದ್ದೇನೆ. ಸಚಿವರಾಗಿದ್ದಾಗಲೂ ಎಲ್ಲ ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಮುಂದೆ ಯಾರ ನೆರಳಿನ ರೀತಿಯಲ್ಲಿ ಕೆಲಸ ಮಾಡಲ್ಲ ಅನ್ನೋ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಆ ಒಂದು ಕುಟುಂಬದಿಂದ ದೂರ ಉಳಿದು ಆಡಳಿತ ನಡೆಸುವ ವಿಶ್ವಾಸವಿದೆ ಎಂದು ಹೇಳಿದರು.
Advertisement
Advertisement
ಬದಲಾವಣೆ ಮೊದಲನೇಯ ಹಂತ ಪ್ರಾರಂಭವಾಗಿದ್ದು, ಮುಂದೆ ಏನು ಆಗುತ್ತೆ ಅಂತ ಎಲ್ಲರೂ ಕಾದು ನೋಡಿ. ಈ ಹಿಂದೆ ವಾಜಪೇಯಿ ಅವರು ನನ್ನ ಸಾಮಾರ್ಥ್ಯ ಕಂಡು ಕೇಂದ್ರದಲ್ಲಿ ಸ್ಥಾನ ನೀಡಿದ್ದರು. ಯಡಿಯೂರಪ್ಪ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದು ಸ್ಮಾರ್ಟ್ ಆಗಿದ್ದೇನೆ. ಗಡ್ಡ ಬಿಟ್ಟಾಗ ಶಿವಾಜಿ ಆಗಿದ್ದೆ, ಈಗ ಬಸವಣ್ಣ ಆಗಿದ್ದೇನೆ. ನಾನೊಬ್ಬ ಬಸನಗೌಡ ಪಾಟೀಲ ಯತ್ನಾಳ್ ಆಗಿಯೇ ಇರುತ್ತೇನೆ. ಒಳ್ಳೆಯ ಕೆಲಸ ಬಂದ್ರೆ ಮಾಡುತ್ತೇನೆ ಎಂದರು.
ನಾನು ಸೂಪರ್ ಸಿಎಂ ಅಲ್ಲ: ಸಿಎಂ ಬದಲಾಗಿದ್ದರಿಂದ ನಾನು ಸೂಪರ್ ಸಿಎಂ ಟ್ಯಾಗ್ ನಿಂದ ಹೊರಗೆ ಬಂದಿರೋದಕ್ಕೆ ಸಂತೋಷವಾಗಿದ್ದೇನೆ. ಮುಂದೆ ಪಕ್ಷದಲ್ಲಿ ಅಥವಾ ಸರ್ಕಾರದೊಳಗೆ ಕೆಲಸ ಮಾಡಬೇಕು ಎಂಬುದನ್ನ ಹೈಕಮಾಂಡ್ ನಿರ್ಧರಿಸಲಿದೆ. 17 ಜನರು ಪಕ್ಷ ಮತ್ತು ಯಡಿಯೂರಪ್ಪನವರನ್ನು ನಂಬಿಕೊಂಡು ಬಂದವರು. ಎಲ್ಲರನ್ನು ಪಕ್ಷ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತೆ ಅನ್ನೋ ವಿಶ್ವಾಸವಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಇದನ್ನೂ ಓದಿ: ಯಾರಿಗೆ ಕೊಕ್ ನೀಡ್ತಾರೆ ಗೊತ್ತಿಲ್ಲ, ನಾನ್ ಮಾತ್ರ ಸಂಪುಟದಲ್ಲಿ ಇರ್ತೀನಿ: ಎಂಟಿಬಿ ನಾಗರಾಜ್
ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದು ಕೇಂದ್ರದ ನಾಯಕತ್ವ. ಹಾಗಾಗಿ ಎಲ್ಲರ ವಿಶ್ವಾಸ ತೆಗೆದುಕೊಂಡು ಸರ್ವಾನುಮತದಿಂದ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ವಲಸಿಗರು ನಮ್ಮ ಪಕ್ಷದವರು, ಸಾಮಾಜಿಕ ನ್ಯಾಯ ಪರಿಗಣಿಸಿ ಮಂತ್ರಿ ಸ್ಥಾನ : ಕಟೀಲ್