ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತೆ ಇರುವ ಮಂಜು ಹಾಗೂ ದಿವ್ಯಾ ಸುರೇಶ್ ನಿನ್ನೆ ಗಂಡ ಹೆಂಡ್ತಿಯಂತೆ ಸಂಧಾನಕ್ಕಾಗಿ ವೈಷ್ಣವಿ ಬಳಿ ಹೋಗಿದ್ದಾರೆ. ಸದ್ಯ ಇವರಿಬ್ಬರ ಕೋಳಿ ಜಗಳ ಬಿಡಿಸಲು ವೈಷ್ಣವಿ ಮಧ್ಯೆ ಪ್ರವೇಶಿಸಿದ್ದು, ನಿನ್ನೆ ಇಬ್ಬರಿಗೂ ತಿಳಿ ಹೇಳಿ ಸಂಧಾನ ಮಾಡಿದ್ದಾರೆ.
Advertisement
ಮಂಜು ಇತ್ತೀಚೆಗೆ ದಿವ್ಯಾ ನನ್ನ ಮೇಲೆ ಸುಮ್ನೆ ಸುಮ್ನೆ ಸಿಟ್ಟು ಮಾಡಿಕೊಳ್ಳುತ್ತಾಳೆ ಎಂದು ಆರೋಪಿಸುತ್ತಾರೆ. ಆಗ ವೈಷ್ಣವಿ ಹೆಣ್ಣು ಅಂದ ಮೇಲೆ ಮುಂಗೋಪ ಸಹಜ ಅನುಸರಿಸಿಕೊಂಡು ಹೋಗುವ ಭಾವನೆನೇ ಇಲ್ವಾ ನಿಮಗೆ ಎಂದು ಪ್ರಶ್ನಿಸುತ್ತಾರೆ. ನಾನು ಅನುಸರಿಸಿಕೊಂಡು ಹೋಗುತ್ತೇನೆ ಆದ್ರೆ ಕೋಪಕ್ಕೆ ಕಾರಣವೇನು ಎಂದಾಗ ಅದು ಪ್ರೀತಿ, ಪ್ರೀತಿ ಹೆಚ್ಚಾದರೆ ಒಂದು ಸ್ವಲ್ಪ ಮೂಗಿನ ತುದಿ ಕೋಪವಿದ್ದೆ ಇರುತ್ತದೆ ಎಂದು ವೈಷ್ಣವಿ ಹೇಳುತ್ತಾರೆ. ಬಳಿಕ ಮಂಜು, ಮೂಗಿನ ತುದಿ ಅಲ್ಲ ದಿವ್ಯಾ ಮೂಗಿನ ಪೂರ್ತಿ ಸಿಟ್ಟಿರುತ್ತದೆ ಎನ್ನುತ್ತಾರೆ.
Advertisement
Advertisement
ಇದಕ್ಕೆ ದಿವ್ಯಾ ಸುರೇಶ್ ನನಗೆ ಮಂಜು ಜೊತೆ ಅನುಸರಿಸಿಕೊಂಡು ಹೋಗಲು ಆಗುತ್ತಿಲ್ಲ. ಸುಮ್ನೆ ಸುಮ್ನೆ ಅಣುಗಿಸುವುದು, ಕೋಪದಲ್ಲಿರುವಾಗ ಬೇಕು ಬೇಕು ಎಂದು ಕೋಪವನ್ನು ಮತ್ತಷ್ಟು ಏರಿಸುವುದು ಎಂದು ಕಂಪ್ಲೇಟ್ ಮಾಡುತ್ತಾರೆ. ಆಗ ಮಂಜು ರೇಗಿಸುವುದು ಎಂದರೆ ಪ್ರೀತಿ ಅಲ್ಲವಾ ಅಂತಾರೆ? ಅದಕ್ಕೆ ವೈಷ್ಣವಿ ಕೋಪ ಎಂದರೂ ಪ್ರೀತಿ ಅಲ್ವಾ.. ಜೀವನ ಅಂದ ಮೇಲೆ ಏಳು ಬೀಳು, ಕಷ್ಟ ಸುಖ, ದುಃಖ ಎಲ್ಲಾ ಇದ್ದೆ ಇರುತ್ತದೆ. ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ.
Advertisement
ನಂತರ ಮಂಜು ಗೇಮ್ಸ್‍ನಲ್ಲಿ ಒಂದು ಬಾರಿ ಮೇಲಿರುತ್ತಾರೆ ಮತ್ತೊಂದು ಬಾರಿ ಕೆಳಗಿರುತ್ತಾರೆ. ಹಾಗಾಗಿ ಅಡ್ಜೆಸ್ಟ್ ಮಾಡಿಕೊಂಡು ಹೋಗ್ಬೇಕು. ಓಕೆ ಇಂದು ಊಟದ ಬಳಿಕ ನಾಳೆ ತನಕ ಟೈಂ ಕೊಟ್ಟರೆ ಪ್ರೀತಿ ಹಂಚಿಕೊಳ್ಳುತ್ತೇವೆ ಎನ್ನುತ್ತಾರೆ. ಇದಕ್ಕೆ ವೈಷ್ಣವಿ ನಾಳೆ ಏನು, ಹೇಗೆ, ಏನಾಗುತ್ತದೆ ಎಂಬುವುದನ್ನು ನನಗೆ ಬಂದು ಹೇಳಿ ಎಂದು ಹಾಸ್ಯ ಮಾಡುತ್ತಾ, ನೀವಿಬ್ಬರು ಒಂದು ರೀತಿಯ ಐಡಿಯಲ್ ಕಪಲ್. ನಿಮ್ಮನ್ನು ನೋಡಿದರೆ ಪ್ರತಿಯೊಬ್ಬರು ಹೀಗೆ ಬದುಕಬೇಕು ಅನಿಸುತ್ತದೆ ಅಂತಹ ಕಪಲ್ ನೀವು. ಸೋ ಬಿಟ್ಟುಕೊಡಬಿಡಿ ಎನ್ನುತ್ತಾರೆ.
ಹಾಗದರೆ ನಿಮ್ಮ ತನಕ ಈ ವಿಚಾರ ಬಂದಿದ್ದು ತಪ್ಪಾ? ಗಂಡ ಹೆಂಡತಿ ಜಗಳ ಇಲ್ಲಿಯತನಕ ಬರಬಾರದಿತ್ತು ಎಂದು ಹೇಳುತ್ತಿದ್ದಿರಾ? ಎಂದು ಕೇಳುತ್ತಾರೆ. ನಮ್ಮ ಶೋಗೆ ಬಂದು ಹೀಗೆಲ್ಲಾ ಮಾತನಾಡಬೇಡಪ್ಪಾ. ನೀವು ಬಂದ್ರಲ್ಲಾ ಅದಕ್ಕೆ ಗೌರವ ನೀಡುತ್ತೇವೆ ಅಂತಾರೆ ವೈಷ್ಣವಿ.
ಬಳಿಕ ಮಂಜು ನಮ್ಮ ‘ಪ್ರೀತಿ ಯಾರಿಗೆ ಕಮ್ಮಿ’ ಎಂದು ದಿವ್ಯಾ ನೋಡುತ್ತಾ ಹಾಡು ಆಡುತ್ತಾರೆ. ಆಗ ದಿವ್ಯಾ ನಿನ್ನ ಪ್ರೀತಿ ಎಲ್ಲರಿಗೂ ಜಾಸ್ತಿನೇ ನೀಡುತ್ತಿದ್ದಿಯಾ ಅದಕ್ಕೆ ಸಮಸ್ಯೆ ಆಗಿರುವುದು ಎಂದಾಗ, ವೈಷ್ಣವಿ ಕೂಡ ಹೌದಪ್ಪಾ ಹೆಂಡತಿ ಬಿಟ್ಟು ಎಲ್ಲರಿಗೂ ಪ್ರೀತಿ ಕೊಟ್ಟರೆ ಹೇಗೆ? ದಿವ್ಯಾಗೆ ನಿನ್ನ ಜೀವನದಲ್ಲಿ ಯಾವ ಸ್ಥಾನ ಕೊಟ್ಟಿದ್ಯಾ? ಎಂದು ಪ್ರಶ್ನಿಸುತ್ತಾರೆ. ದಿವ್ಯಾಗೆ ಪ್ರಥಮ ಸ್ಥಾನ ಕೊಟ್ಟಿದ್ದೇನೆ. ದಿವ್ಯಾ ಪೊಸೆಸಿವ್ ನೆಸ್ ನನಗೆ ಇಷ್ಟ. ಆದರೆ ಅತೀ ಆದರೆ ಕಷ್ಟ ಎಂದು ಮಂಜು ಹೇಳುತ್ತಾರೆ.
ಕೊನೆಯದಾಗಿ ವೈಷ್ಣವಿ ಇಂತಹ ಇಷ್ಟು ಚೆಂದದ ಹೆಂಡ್ತಿ ನಿಮ್ಮ ಜೀವನದಲ್ಲಿ ಹುಡುಕಿದರೂ ಸಿಗುವುದಿಲ್ಲ ಬರೆದಿಟ್ಟುಕೊಳ್ಳಿ ಎಂದು ಹೇಳಿ ಈ ನಾಟಕವನ್ನು ಹಾಸ್ಯಮಯವಾಗಿ ಮುಗಿಸಿದ್ದಾರೆ.