ಬಿಗ್‍ಬಾಸ್ ಕೆಲವು ಸ್ಪರ್ಧಿಗಳಿಗೆ ಸಿಗರೇಟ್‍ಗಳನ್ನು ನೀಡುತ್ತಾರೆ. ಶುಭಾ ಪೂಂಜಾ ತಮಾಷೆಗಾಗಿ ಸಿಗರೇಟ್‍ಗಳನ್ನು ಬಿಚ್ಚಿಟ್ಟುಕೊಂಡು ಕೆಲವು ಸಮಯಗಳ ಕಾಲ ಕಾಡಿಸಿದ್ದಾರೆ. ಪುರುಷ ಸ್ಪರ್ಧಿಗಳು ಸಿಗರೇಟ್ ನೀಡದ ಬಿಗ್‍ಬಾಸ್ ಬಗ್ಗೆ ಕೊಂಚ ಬೇಸರವಾಗಿ ಕುಳಿತಿದ್ದರು.
ಬಿಗ್ ಬಾಸ್ ಪುರುಷ ಸ್ಪರ್ಧಿಗಳಿಗೆ ಸಿಗರೇಟ್ ನೀಡಿದ್ದರು. ಅದನ್ನು ಕಂಡ ಶುಭಾ ಪೂಂಜಾ ಅವರು ರಾಜೀವ್ ಮತ್ತು ಅರವಿಂದ್ ಅವರ ಸಿಗರೇಟ್ ಬಿಟ್ಟು ಉಳಿದವರ ಸಿಗರೇಟ್‍ನ್ನು ಮುಚ್ಚಿಟ್ಟಿದ್ದರು. ಈ ವಿಷಯ ಯಾರಿಗೂ ತಿಳಿಯಬಾರದೆಂದು ರಾಜೀವ್ ಹಾಗೂ ಅರವಿಂದ್‍ಗೂ ತಿಳಿಸಿದ್ದರು. ರಘು ಗೌಡ, ಶಮಂತ್ ಬ್ರೊ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ನಮ್ಮ ಸಿಗರೇಟ್ ಎಲ್ಲಿ ಎಂದು ಗಲಿಬಿಲಿಯಿಂದ ಪ್ರಶ್ನೆ ಮಾಡಿದ್ದಾರೆ. ಮಂಜು ಪಾವಗಡ ಕೂಡ ನಮ್ಮ ಸಿಗರೇಟ್ ಎಲ್ಲಿ? ಅರವಿಂದ್ ಅವರಿಗೆ ಮಾತ್ರ ಯಾಕೆ ಸಿಗರೇಟ್ ಕೊಟ್ಟಿದ್ದಾರೆ? ಎಂದು ಗಾಬರಿಯಿಂದ ಮನೆಯ ಸದಸ್ಯರೆಲ್ಲರನ್ನು ಪ್ರಶ್ನೆ ಮಾಡಿದ್ದರು.
ಸಿಗರೇಟ್ ಕೊಡಲಿಲ್ಲ ಅಂದರೆ ದಂಗೆ, ದಾಳಿಗಳು ಆಗತ್ತೆ, ಯುದ್ಧ, ಬಂಡಾಯ ಆಗತ್ತೆ ಎಂದು ಹೇಳಿದ್ದರು. ಇದೇನಾದರೂ ಟಾಸ್ಕ್ ಇರಬಹುದಾ? ಬೇರೆಯವರು ಎತ್ತಿಟ್ಟುಕೊಂಡಿರಬಹುದಾ? ಎಂಬ ಅನುಮಾನ ಕೂಡ ರಘುಗೆ ಬಂದಿದೆ. ಆದರೆ ಶುಭಾ ಮಾತ್ರ ಏನೂ ಮಾತನಾಡದೆ ಕೆಲವು ಸಮಯಗಳ ಕಾಲ ಪುರುಷ ಸ್ಪರ್ಧಿಗಳನ್ನು ಆಟ ಆಡಿಸಿದ್ದಾರೆ.
ಪುರುಷ ಸ್ಪರ್ಧಿಗಳ ಕಷ್ಟವನ್ನು ನೋಡಲಾಗದೆ ಕೆಲವು ಸಮಯಗಳ ನಂತರ ಶುಭಾ ಪೂಂಜಾ ಸ್ಮೋಕ್ ಝೋನ್‍ನಲ್ಲಿ ಸಿಗರೇಟ್ ಇಟ್ಟುಬಂದಿದ್ದರು. ಈ ವಿಷಯ ಸಿಗರೇಟ್ ಪ್ರಿಯರಿಗೆ ತಿಳಿದ ನಂತರದಲ್ಲಿ ಇದು ಯಾರೋ ಮಾಡಿದ ಕೆಲಸ ಅಂತ ಕೂಡ ಗೊತ್ತಾಗಿದೆ. ಆಗ ಶುಭಾ ಪೂಂಜಾ ಅವರು ನಮ್ಮ ಮೇಲೆ ಆರೋಪ ಮಾಡಿದ್ರಿ ಅಂತ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.
ಸಿಗರೇಟ್ ಪ್ರಾಣ ಉಳಿಸತ್ತೆ, ಆದರೆ ನಡೆದುಕೊಂಡು ಹೋಗೋಕೆ ಅದಕ್ಕೇನಾದರೂ ಪ್ರಾಣ ಇದೆಯಾ? ಜೇನುಗೂಡಿನಂತೆ ಇರುವ ಮನೆಯ ಮಂದಿ ಮೇಲೆ ಯಾಕೆ ಡೌಟ್ ಪಡೋದು? ಅಂತ ರಘು ಹೇಳಿದ್ದಾರೆ.
ಆ ಶುಭಾ ಸಿಗರೇಟ್ ಬಚ್ಚಿಟ್ಟಿದ್ದು ನಾನೆ ಎಂದು ರಘು ಬಳಿ ಸತ್ಯ ಒಪ್ಪಿಕೊಂಡಿದ್ದಾರೆ. ಮಂಜುಗೆ ಈ ವಿಷಯ ಹೇಳದೆ, ಸಿಗರೇಟ್ ಮುಚ್ಚಿಡುವ ಅಂತ ಶುಭಾ ಅವರು ರಘುಗೆ ಹೇಳಿದ್ದರು. ಒಟ್ಟಿನಲ್ಲಿ ಸಿಗರೇಟ್ ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯವಾದ ವಿಷಯ. ಕೆಲವು ಪುರುಷ ಸ್ಪರ್ಧಿಗಳಿಗೆ ಸಿಗರೇಟ್ ಇಲ್ಲ ಅಂದ್ರೆ ಆಗುವುದಿಲ್ಲ ಎಂದು ಅನ್ನಿಸಿ ಬಿಡುತ್ತದೆ.