ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಗಂಡು ಮಗುವಿನ ತಂದೆಯಾಗಿದ್ದಾರೆ.
ಹರ್ಭಜನ್ ಸಿಂಗ್ ಪತ್ನಿ ಗೀತಾ ಬಾಸ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿರುವ ಬಜ್ಜಿ, ಗಂಡು ಮಗುವಿನ ತಂದೆಯಾಗಿದ್ದೇನೆ ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ತಂದೆಯಾಗಿರುವ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಈ ಮೂರು ವಸ್ತುಗಳನ್ನು ಮರೆಯುತ್ತೇನೆ: ರಮ್ಯಾ
View this post on Instagram
ಗೀತಾ ಬಸ್ರಾ ಮತ್ತು ಮಗು ಆರೋಗ್ಯವಾಗಿದ್ದಾರೆ. ನಾವು ಸಂತೋಷದಲ್ಲಿ ಮುಳುಗಿದ್ದೇವೆ. ನಿಮ್ಮೆಲ್ಲಾ ಪ್ರೀತಿ-ಹಾರೈಕೆಗಳಿಗೆ ನಮ್ಮ ಧನ್ಯವಾದಗಳು. ಆರೋಗ್ಯವಂತ ಮಗುವನ್ನು ನಮಗೆ ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತನಿಗೆ ಧನ್ಯವಾದಗಳು ಎಂದು ಸಿಂಗ್ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
Blessed with a Baby boy ???????????????????????????????????????????????? shukar aa Tera maalka ???????? pic.twitter.com/dqXOUmuRID
— Harbhajan Turbanator (@harbhajan_singh) July 10, 2021
2015ರಲ್ಲಿ ಅಕ್ಟೋಬರ್‌ನಲ್ಲಿ ಗೀತಾ ಬಾಸ್ರಾ ಅವರನ್ನು ಹರ್ಭಜನ್ ವಿವಾಹವಾಗಿದ್ದರು. ಹರ್ಭಜನ್ ದಂಪತಿ ಈಗಾಗಲೇ ಹಿನಯಾ ಎಂಬ ಹೆಣ್ಣು ಮಗು ಇದ್ದು, 2016ರಲ್ಲಿ ಹೆಣ್ಣು ಮಗು ಜನಿಸಿತ್ತು. ಟೀಂ ಇಂಡಿಯಾದ ಶ್ರೇಷ್ಠ ಸ್ಪಿನ್ನರ್ ಎಂದರೇ ಖ್ಯಾತಿ ಪಡೆದಿರುವ 41 ವರ್ಷದ ಹರ್ಭಜನ್ ಸಿಂಗ್, 2016ರ ಏಷ್ಯಾಕಪ್‍ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯವಾಡಿದ್ದರು.