– ಪ್ರತಿನಿತ್ಯ ವರದಕ್ಷಿಣೆ ಕಿರುಕುಳ
– ಅತ್ತೆ ಮಾವ, ಪತಿಯ ವಿರುದ್ಧ ದೂರು
ಭೋಪಾಲ್: ಆಕಸ್ಮಿಕವಾಗಿ ಗಂಡನ ಮೊಬೈಲ್ ನೋಡಿದ ಪತ್ನಿಗೆ ತನ್ನ ಮದುವೆಯ ರಹಸ್ಯ ತಿಳಿದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಜಬಲ್‍ಪುರದಲ್ಲಿ ನಡೆದಿದೆ.
ಮನೇಗಾಂವ್ ರಾಂಝಿ ನಿವಾಸಿಯಾದ ರೂಪಾಲಿ ಪಟೇಲ್ ಅರಣ್ಯ ಸಿಬ್ಬಂದಿ ಶಿವ್‍ಚರಣ್ ಸಿಂಗ್ ಪಟೇಲ್‍ನನ್ನು 2019ರಲ್ಲಿ ವಿವಾಹವಾಗಿದ್ದಳು. ಮದುವೆಗೆ ಮೊದಲು ಚೆನ್ನಾಗಿದ್ದವನು ಮದುವೆಯ ನಂತರ ವರಸೆ ಬದಲಾಯಿಸಿದ್ದಾನೆ.
ಪತಿಯ ತಂದೆ-ತಾಯಿ ನನ್ನ ಮಗ ಸರ್ಕಾರಿ ಕೆಲಸದಲ್ಲಿದ್ದಾನೆ. ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರು. ಕಾರು ತೆಗೆದುಕೊಳ್ಳಬೇಕು ನಿನ್ನ ತವರು ಮನೆಯಿಂದ 2 ಲಕ್ಷ ಹಣವನ್ನು ತರಬೇಕು ಎಂದು ಒತ್ತಾಯಿಸುತ್ತಿದ್ದರು. ಪತಿಯೂ ಕೂಡ ಕಿರುಕುಳ ನೀಡುತ್ತಿದ್ದನು ಎಂದು ರೂಪಾಲಿ ಪಟೇಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪತಿ ಕೆಲಸಕ್ಕೆಂದು ಹೊರಗೆ ಹೋದರೆ ಹೆಚ್ಚಿನ ದಿನ ಬೇರೆಕಡೆಯಲ್ಲಿ ಉಳಿಯುತ್ತಿದ್ದರು. ಒಂದು ದಿನ ಪತಿಯ ಮೊಬೈಲ್ ನೋಡಿದ ನನ್ನ ಪತಿ ಬೆರೆ ಮಹಿಳೆ ಮತ್ತು ಮಗುವಿನೊಂದಿಗೆ ಇರುವುದು ತಿಳಿಯುತ್ತು. ಆ ಮಹಿಳೆ ನನ್ನ ಪತಿಯ ಮೊದಲ ಪತ್ನಿ ಎನ್ನುವುದು ಗೊತ್ತಾಯಿತು.
ಅತ್ತೆ ಮಾವನನ್ನು ಪತಿಯ ಮೊದಲನೇ ಮದುವೆಯ ವಿಚಾರವಾಗಿ ಕೇಳಿದಾಗ ವರದಕ್ಷಣೆ ಕಿರುಕುಳ ನೀಡುತ್ತಿದ್ದರು. ಈ ವಿಚಾರವಾಗಿ ಮನನೊಂದ ರೂಪಾಲಿ ಪಟೇಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಲಾಗಿದೆ ಈ ಕುರಿತಾಗಿ ಹೆಚ್ಚಿನ ತನಿಖೆಯನ್ನು ಆರಂಭಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.