ನವದೆಹಲಿ: ಕೋವಿಡ್19 ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಕಾರ್ಯತಂತ್ರಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಅವರು ಟೀಕಿಸಿ ಟ್ವೀಟ್ ಮಾಡಿದ್ದಾರೆ.
ना टेस्ट हैं, ना हॉस्पिटल में बेड,
ना वेंटिलेटर हैं, ना ऑक्सीजन,
वैक्सीन भी नहीं है,
बस एक उत्सव का ढोंग है।
PMCares?
— Rahul Gandhi (@RahulGandhi) April 15, 2021
ಮನಬಂದಂತೆ ಲಾಕ್‍ಡೌನ್ ಹೇರುವುದು, ಗಂಟೆ ಬಾರಿಸುವುದು ಮತ್ತು ದೇವರನ್ನು ಪ್ರಾರ್ಥಿಸಿ ಹಾಡುವುದು ಸರ್ಕಾರದ ಕಾರ್ಯತಂತ್ರಗಳಾಗಿವೆ ಎಂದು ವ್ಯಂಗ್ಯಮಾಡಿ ಟ್ವೀಟ್ ಮಾಡಿ ಕೇಂದ್ರಸರ್ಕಾರ ಕೊರೊನಾ ನಿಯಂತ್ರಣಕ್ಕೆ ಮಾಡುತ್ತಿರುವ ಕಾರ್ಯಗಳ ಕುರಿತಾಗಿ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.
केंद्र सरकार की कोविड रणनीति-
स्टेज 1- तुग़लक़ी लॉकडाउन लगाओ।
स्टेज 2- घंटी बजाओ।
स्टेज 3- प्रभु के गुण गाओ।
— Rahul Gandhi (@RahulGandhi) April 16, 2021
ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಯೋಜನೆ ರೂಪಿಸದೆ ಸರ್ಕಾರ ಮನಸ್ಸಿಗೆ ಬಂದಂತೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್ 19 ನಿಯಂತ್ರಣ ಮತ್ತು ಲಸಿಕೆ ಅಭಿಯಾನದ ಕುರಿತು ಸರ್ಕಾರ ಕೈಗೊಂಡ ನಿರ್ಧಾರಗಳು ಮತ್ತು ಯೋಜನೆಗಳನ್ನು ಈ ಹಿಂದೆಯೂ ಕಾಂಗ್ರೆಸ್ ಟೀಕಿಸಿತ್ತು.