ಪಾಟ್ನಾ: ಗಂಗಾ ನದಿಗೆ ಜೀಪ್ ಉರುಳಿ ಬಿದ್ದಿದೆ. ಜೀಪ್ನಲ್ಲಿದ್ದ ಸುಮಾರು 15 ಮಂದಿ ಪ್ರಯಾಣಿಕರಲ್ಲಿ 10 ಮಂದಿ ನಾಪತ್ತೆಯಾಗಿರುವ ಘಟನೆ ಪಾಟ್ನಾದ ಪೀಪಾಪುಲ್ನಲ್ಲಿ ನಡೆದಿದೆ.
ಜೀಪ್ 15 ಮಂದಿ ಪ್ರಯಾಣಿಕರನ್ನು ಹೊತ್ತು ಪೀಪಾ ಸೇತುವೆ ಮೇಲೆ ಸಾಗುತ್ತಿತ್ತು. ಆದರೆ ಆಯತಪ್ಪಿ ನದಿಗೆ ಉರುಳಿಬಿದ್ದಿದೆ. ಈ ವೇಳೆ ಬ್ರಿಡ್ಜ್ನ ರೇಲಿಂಗ್ ಮುರಿದು ಅಪಘಾತ ಸಂಭವಿಸಿದೆ.
Bihar: A jeep, carrying at least 15 passengers, fell into river Ganga at Peepapul in Patna today; at least 10 people missing. Search operation for the missing peole is underway. pic.twitter.com/wObcjXFYQM
— ANI (@ANI) April 23, 2021
ಜೀಪ್ನಲ್ಲಿ 15 ಮಂದಿ ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ. 10 ಮಂದಿ ಪ್ರಯಾಣಿಕರು ಕಾಣುತ್ತಿಲ್ಲ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ಮಾಡುತ್ತಿದ್ದಾರೆ. ಜೀಪ್ನಲ್ಲಿದ್ದ ಪ್ರಯಾಣಿಕರು ಅಖಿಲ್ಪುರ್ ಮೂಲದವರು ಎಂದು ತಿಳಿದು ಬಂದಿದೆ. ಇನ್ನು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.