ಬಾಲಿವುಡ್ ಖ್ಯಾತ ನಟ ಗೋವಿಂದ (Actor Govind) ವಿವಾಹ ವಿಚ್ಛೇದನ ವಿಚಾರ ಕೆಲ ದಿನಗಳ ಹಿಂದಷ್ಟೇ ಮತ್ತೆ ಮುನ್ನೆಲೆಗೆ ಬಂದಿತ್ತು. ಇದರ ನಡುವೆಯೇ ಗಣೇಶ ಹಬ್ಬದಂದು (Ganesh Festival) ಗೋವಿಂದ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಕೆಲ ತಿಂಗಳಿಂದ ಗೋವಿಂದ ಹಾಗೂ ಪತ್ನಿ ಸುನೀತಾ ಅವರ ವಿಚ್ಛೇದನ ವಿಚಾರ ಚರ್ಚೆಯಲ್ಲಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಗೋವಿಂದ ಅವರ ಪತ್ನಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ ಅವರು ವಿಚ್ಛೇದನ ಕೋರಿದ್ದರು. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು.ಇದನ್ನೂ ಓದಿ: ತೇಜ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್
ಇದೀಗ ನಟ/ರಾಜಕಾರಣಿ ಗೋವಿಂದ ಮುಂಬೈನ ತಮ್ಮ ನಿವಾಸದಲ್ಲಿ ಖುಷಿ ಖುಷಿಯಿಂದ ಗಣಪತಿ ಹಬ್ಬ ಆಚರಿಸಿದ್ದಾರೆ. ಮನೆಯ ಹೊರಗೆ ಪತ್ನಿ ಜೊತೆಗೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.
ದಂಪತಿ ಒಟ್ಟಿಗೆ ನಿಂತು ಎಲ್ಲರಿಗೂ ಸಿಹಿ ಹಂಚಿದ್ದಾರೆ. ಗೋವಿಂದ ಹಾಗೂ ಸುನೀತಾ ಅಹುಜಾ ಜೋಡಿ ಬಹಳ ಅನ್ಯೋನ್ಯವಾಗಿರುವಂತೆ ಕಂಡುಬಂದ್ರು. ವಿಶೇಷ ಅಂದ್ರೆ ಕಪಲ್ ಟ್ವಿನ್ಸ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಪ್ರೇಯಸಿ ಜೊತೆ ಜಯಂ ರವಿ ಮ್ಯಾಚಿಂಗ್ ಮ್ಯಾಚಿಂಗ್!