ಪ್ರತಿಯೊಬ್ಬರು ತಮ್ಮ ಕುಟುಂಬ ಹಾಗೂ ಪ್ರೀತಿಪಾತ್ರದವರ ಸಮ್ಮುಖದಲ್ಲಿ ಮದುವೆಯಾಗಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ ಕೊರೊನಾ ವೈರಸ್ ಗ್ರಾಂಡ್ ಆಗಿ ಮದುವೆ ಆಗಬೇಕೆಂದುಕೊಂಡಿದ್ದ ಅದೆಷ್ಟೂ ಜೋಡಿಗಳ ಆಸೆಗೆ ತಣ್ಣಿರೆರಚಿದೆ ಎಂದೇ ಹೇಳಬಹುದು.
ಅದರಲ್ಲಿಯೂ ಕೋವಿಡ್-19 ಎರಡನೇ ಅಲೆಯಿಂದ ಸರ್ಕಾರವು ಹಲವಾರು ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಮದುವೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಂದಿ ಮಾತ್ರ ಪಾಲ್ಗೊಳ್ಳಬೇಕೆಂದು ಸೂಚಿಸಿದೆ. ಕೊರೊನಾ ವೈರಸ್‍ನಿಂದಾಗಿ ಅದ್ದೂರಿಯಾಗಿ ಮದುವೆಯಾಗಬೇಕೆಂದುಕೊಂಡಿದ್ದ ಹಲವು ಜೋಡಿಗಳು ಆಸೆ ಇದೀಗ ನುಚ್ಚುನೂರಾಗಿದೆ. ಆದರೂ ನೈಟ್ ಕಫ್ರ್ಯೂ ಲಾಕ್‍ಡೌನ್ ನಿರ್ಬಂಧಗಳ ಮಧ್ಯೆ ಬ್ಯಾಂಡ್ ಬಾಜಾ ಬರಾತ್ ಜೊತೆಗೆ ಮದುವೆಯನ್ನು ಅತ್ಯಂತ ದುಃಖಕರವಾಗಿ ಕೆಲವರು ಆಚರಿಸಿಕೊಂಡಿದ್ದಾರೆ.
Advertisement
Advertisement
ಹೌದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, 27 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ನೈಟ್ ಕಫ್ರ್ಯೂನಿಂದಾಗಿ ರಸ್ತೆ ಪೂರ್ತಿ ಖಾಲಿಯಾಗಿರುತ್ತದೆ. ಈ ವೇಳೆ ವರನು ಕುದುರೆ ಮೇಲೆ ಕುಳಿತುಕೊಂಡು ಬರುತ್ತಿದ್ದರೆ, ಕೇವಲ 3 ಮಂದಿ ಬ್ಯಾಂಡ್ ಬಾರಿಸುತ್ತಾ ವರನ ಜೊತೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ.
Advertisement
ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಎಲ್ಲಿಯದ್ದು ಎನ್ನುವುದು ದೃಢಪಟ್ಟಿಲ್ಲ.