– ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಯತ್ನ
– ಅಂತರಾಷ್ಟ್ರಿಯ ಷಡ್ಯತಂತ್ರದ ಬಗ್ಗೆ ಸ್ಫೋಟಕ ವಿಚಾರ ಪ್ರಕಟ
ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಓರ್ವ ರೈತ ನಾಯಕನ ಹತ್ಯೆಗೆ ಖಲಿಸ್ತಾನಿ ಉಗ್ರರು ಸಂಚು ರೂಪಿಸಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
Advertisement
ಬೆಲ್ಜಿಯಂ ಮತ್ತು ಇಂಗ್ಲೆಂಡ್‍ನ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಂಚು ರೂಪಿಸುತ್ತಿದೆ ಎಂಬ ಸ್ಪೋಟಕ ಮಾಹಿತಿಯನ್ನು ಗುಪ್ತಚರ ವಿಭಾಗ ಸರ್ಕಾರಕ್ಕೆ ತಿಳಿಸಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
Advertisement
ಗುಪ್ತಚರ ವಿಭಾಗ ತಿಳಿಸಿರುವ ಮಾಹಿತಿ ಪ್ರಕಾರ ಸಿಂಘುಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತ ನಾಯಕರನ್ನು ಗುರಿಯಾಗಿಸಿ ಅವರ ಮೇಲೆ ದಾಳಿ ಮಾಡಲು ಇಂಗ್ಲೆಂಡ್ ಮತ್ತು ಬೆಲ್ಜಿಯಂನ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಕಲೆಹಾಕಿ ವ್ಯವಸ್ಥಿತ ಸಂಚನ್ನು ಮಾಡುತ್ತಿದೆ. ಇದರೊಂದಿಗೆ ಈ ಭಯೋತ್ಪಾದಕ ಸಂಘಟನೆಗಳಿಗೆ ಭಾರತದಲ್ಲೇ ಇರುವ ಕೆಲವು ಸಂಘಟನೆಗಳು ಬೆಂಬಲ ನೀಡುತ್ತಿದೆ. ಅದೇ ರೀತಿ ಭಾರತ ನೆರೆಯ ರಾಷ್ಟ್ರಗಳಾದ ಕೆನಡಾ, ಇಂಗ್ಲೆಂಡ್, ಬೆಲ್ಜಿಯಂ ಮತ್ತು ಪಾಕಿಸ್ತಾನದ ಹಲವು ಸಂಘಟನೆಗಳು ಖಲಿಸ್ತಾನದ ಭಯೋತ್ಪಾದಕರಿಗೆ ಬೆಂಬಲ ಸೂಚಿಸುತ್ತಿದೆ ಎಂದು ಮಾಹಿತಿಯನ್ನು ನೀಡಿದೆ.
Advertisement
Advertisement
ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿರುವ ಮಾಹಿತಿ ಪ್ರಕಾರ ಖಲಿಸ್ತಾನಿ ಭಯೋತ್ಪಾದಕರು ಈಗಾಗಲೇ ಮೂರು ರೀತಿಯ ಸಂಚನ್ನು ರೂಪಿಸಿ ರೈತನಾಯಕರನ್ನು ಹತ್ಯೆಮಾಡಲು ಪ್ಲಾನ್ ರೂಪಿಸಿದ್ದರು. ಇದರೊಂದಿಗೆ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುವ ರೈತರನ್ನೇ ಗುರಿಯಾಗಿಸಿದ್ದಾರೆ ಎಂದು ತಿಳಿಸಿದ್ದಾರೆ.
ರೈತ ಪ್ರತಿಭಟನೆಯಲ್ಲಿ ನಿರತರಾಗಿರುವ ನಾಯಕರನ್ನು ಹತ್ಯೆ ಮಾಡಿ ನಂತರ ಭಾರತದಲ್ಲಿ ತೀವ್ರವಾಗಿ ಗಲಾಟೆಗಳನ್ನು ಎಬ್ಬಿಸಿ ಅಶಾಂತಿ ಕದಡುವ ಮೂಲಕ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗೆ ಪಾಕಿಸ್ತಾನದ ಬೆಂಬಲವಿದ್ದು, ಈಗಾಗಲೇ ಪಾಕಿಸ್ತಾನದಿಂದ 400 ಟ್ವಿಟ್ಟರ್ ಖಾತೆಗಳು ರೈತ ಪ್ರತಿಭಟನೆಯ ಕುರಿತು ಕಾರ್ಯಾಚರಣೆ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.