ಖಲೀಸ್ಥಾನ ಚಳುವಳಿಗಾರರ ವಿರುದ್ಧ ಅನಂತಕುಮಾರ್ ಹೆಗಡೆ ದೂರು ದಾಖಲು

Public TV
1 Min Read
ananth

ಕಾರವಾರ: ರಾಷ್ಟ್ರೀಯ ಏಕಾಗ್ರತೆ ಹಾಗೂ ಅಸ್ತಿತ್ವಕ್ಕೆ ಭಂಗ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಖಲೀಸ್ಥಾನ ಚಳುವಳಿಗಾರರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ananthkumar hegde

ಖಲೀಸ್ಥಾನ ಚಳುವಳಿಯ ಹೋರಾಟಗಾರ ಗುರುಪಥವಂತ ಸಿಂಗ್ ಪನೂನ ಆರೋಪಿತನಾಗಿದ್ದಾನೆ. ಈ ಹಿಂದೆ ಸಂಸದ ಹೆಗಡೆ ಖಲೀಸ್ಥಾನದ ಕುರಿತು ಟ್ವಿಟ್ಟರ್ ಮೂಲಕ ಖಲೀಸ್ಥಾನ ಚಳುವಳಿಗಾರರ ವಿರುದ್ಧ ಜಾಹಿರಾತನ್ನು ಪ್ರಕಟಿಸಿದ್ದರು. ಈ ಕಾರಣಕ್ಕೆ ಚಳುವಳಿಗಾರರು ದೂರವಾಣಿ ಮೂಲಕ ಕೆಲ ದಿನಗಳ ಹಿಂದೆ ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಹೆಗಡೆ ಪ್ರತಿಕ್ರಿಯಿಸಿರಲಿಲ್ಲ.

Ananthkumar Hegde

ಸಂಸದ ಹೆಗಡೆ ದೂರವಾಣಿಗೆ ಉತ್ತರ ನೀಡದ ಕಾರಣ ಜು.19 ರಂದು ಅವರ ದೂರವಾಣಿಗೆ +32460207270 ಸಂಖ್ಯೆಯಿಂದ ‘ದೆಹಲಿ ಬನೆಗಾ ಖಲೀಸ್ತಾನ’ ಎಂಬ ಸಂದೇಶ ಕಳಿಸಿ, ಅದೇ ದಿನ ವಿವಿಧ ದೂರವಾಣಿಯ ಮುಖಾಂತರ ಕರೆ ಮಾಡಿ ಪಂಜಾಬಿ ಭಾಷೆಯ ಧ್ವನಿ ಮುದ್ರಣವನ್ನು ಕಳಿಸಿದ್ದರು. ಅದರಲ್ಲಿ ತಾವೂ ಪ್ರತ್ಯೇಕ ಖಲೀಸ್ಥಾನಕ್ಕಾಗಿ ಚಟುವಟಿಕೆಗಳನ್ನು ಬಹಿರಂಗವಾಗಿ ಮಾಡುತ್ತಿದ್ದೇವೆ. ನೀವು ಏನೂ ಬೇಕಾದರೂ ಮಾಡಿಕೊಳ್ಳಿ. ದೇಶದ್ರೋಹಿ ಕೃತ್ಯದಿಂದಲೇ ಭಾರತ ಸರ್ಕಾರವನ್ನು ಉರುಳಿಸುತ್ತೇವೆ ಎಂಬ ಅರ್ಥದಲ್ಲಿ ಸವಾಲು ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸಂಸದ ಹೆಗಡೆ ಜು.22 ರಂದು ಶಿರಸಿಯ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *