ಮಂಡ್ಯ: ರಾಜ್ಯದಲ್ಲಿ ಕಫ್ರ್ಯೂ ಜಾರಿ ಮಾಡಿರುವ ಪರಿಣಾಮ ಬಡವರು ಸಂಕಷ್ಟಕ್ಕೆ ಗುರಿಯಾಗಬಾರದು ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಬರುವ 25 ಸಾವಿರ ಬಡ ಕುಟುಂಬಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ರೇಷನ್ ಹಾಗೂ ತರಕಾರಿ ಕಿಟ್‍ನ್ನು ವಿತರಿಸಿದರು. ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಸಾಂಕೇತಿಕವಾಗಿ ನೀಡಲಾಯಿತು.
ಇದೇ ವೇಳೆ ವೈದ್ಯಕೀಯ ಸಿಬ್ಬಂದಿಗೆ ರೇಷನ್ ಹಾಗೂ ತರಕಾರಿಗಳು ನೀಡುವುದರ ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಲು 5000 ರೂ. ನಗದು ಹಣವನ್ನು ಸಹ ನೀಡಲಾಯಿತು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರು ಹಾಜರಿದ್ದರು.
ಜನರಿಗೆ ಈ ಸಂದರ್ಭದಲ್ಲಿ ನಾವು ಸಹಾಯ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ. ಎಲ್ಲಾ ಕ್ಷೇತ್ರದ ಜನರು ಇದೇ ರೀತಿಯ ಕೆಲಸ ಮಾಡಿ ಜನರಿಗೆ ಸಹಾಯ ಹಸ್ತ ಚಾಚಬೇಕಾಗಿದೆ. ಇದಲ್ಲದೆ ವೈದ್ಯಕೀಯ ಸಿಬ್ಬಂದಿಗೆ ಧೈರ್ಯ ತುಂಬುವುದು ಹಾಗೂ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ನಮ್ಮದಾಗಿದೆ. ಅದಕ್ಕಾಗಿ ಅವರನ್ನು ಗೌರವಿಸಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.