ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾರ್ಥ ಹೋರಾಟಗಾರರಿಗೆ ರಾಷ್ಟ್ರಪತಿಗಳ ಪರವಾಗಿ ಸನ್ಮಾನ

Public TV
1 Min Read
HBL QUIT INDIA MOVEMENT FIGHTERS 3

ಧಾರವಾಡ/ಹುಬ್ಬಳ್ಳಿ: ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾರ್ಥ ಹೋರಾಟಗಾರರಿಗೆ ರಾಷ್ಟ್ರಪತಿಗಳ ಪರವಾಗಿ ಸನ್ಮಾನ ಮಾಡಲಾಗಿದೆ.

ಭಾರತೀಯ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿರುವ ಆಗಸ್ಟ್ 9ರ ಕ್ವಿಟ್ ಇಂಡಿಯಾ ಚಳುವಳಿ ಅಂಗವಾಗಿ ಭಾರತದ ರಾಷ್ಟ್ರಪತಿಗಳು ಧಾರವಾಡ ಜಿಲ್ಲೆಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮ ಕಚೇರಿಯಿಂದ ಶಾಲು, ಹಾರ ಮತ್ತು ಸಂದೇಶಪತ್ರಗಳನ್ನು ಅವರಿಗೆ ತಲುಪಿಸಿ ಗೌರವಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿದ್ದರು.

HBL QUIT INDIA MOVEMENT FIGHTERS 2

ರಾಷ್ಟ್ರಪತಿಗಳ ಸಂದೇಶದೊಂದಿಗೆ ಜಿಲ್ಲಾಧಿಕಾರಿಗಳ ಪ್ರತಿನಿಧಿಯಾಗಿ ಉಪವಿಭಾಗಾಧಿಕಾರಿ ಮಹ್ಮದ ಜುಬೇರ್ ಅವರು ಇಂದು ಬೆಳಗ್ಗೆ ಹುಬ್ಬಳ್ಳಿಯ ಉಣಕಲ್ ಗ್ರಾಮಕ್ಕೆ ತೆರಳಿದ್ರು. ಟೀಚರ್ಸ್ ಕಾಲೋನಿಯಲ್ಲಿರುವ ಸ್ವಾತಂತ್ರ್ಯ ಯೋಧ ಶ್ರೀರಾಮ ವಿಷ್ಣುಕಾಂತ ತೆಂಬೆ (99) ಮತ್ತು ಧಾರವಾಡ ತಾಲೂಕಿನ ಮೊರಬ ಗ್ರಾಮದ ನೂರ್ ಅಹ್ಮದ ನದಾಫ್ ಅವರನ್ನು ಭೇಟಿಯಾದರು. ಈ ವೇಳೆ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ ಅಂಗವಾಗಿ ಭಾರತ ಸರ್ಕಾರ, ರಾಷ್ಟ್ರಪತಿಭವನದಿಂದ ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಮಾಡಲು ನೀಡಿದಂತಹ ಅಂಗವಸ್ತ್ರ, ಶಾಲು ಹಾಗೂ ಅಭಿನಂದನಾಪತ್ರಗಳನ್ನು ನೀಡಿ, ರಾಷ್ಟ್ರಪತಿಗಳ ಪರವಾಗಿ ಸನ್ಮಾನಿಸಿ, ಗೌರವ ಸಲ್ಲಿಸಿದರು.

HBL QUIT INDIA MOVEMENT FIGHTERS 1

ಈ ಸಂದರ್ಭದಲ್ಲಿ ವಿಷ್ಣುಕಾಂತ ತೆಂಬೆ ಅವರ ಧರ್ಮಪತ್ನಿ, ಮಕ್ಕಳು ಹಾಗೂ ನೂರ್ ಅಹ್ಮದ ನದಾಫ ಅವರ ಮಗಳು ಸೇರಿದಂತೆ ಅವರ ಕುಟುಂಬ ಸದಸ್ಯರು, ಕಂದಾಯ ಇಲಾಖೆ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *