ಕಾರವಾರ: ಡೀಲರ್ ಒಬ್ಬರು ಕ್ವಿಂಟಾಲ್ ಗೂ ಹೆಚ್ಚು ತೂಕದ ಚಾಕ್ಲೇಟ್ ಅನ್ನು ರಸ್ತೆಯಲ್ಲಿ ಎಸೆದು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹುಡ್ಲಮನೆ ರಸ್ತೆಯಲ್ಲಿ ನಡೆದಿದೆ.
ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಬಗೆಯ ಪ್ಲೇವರ್ ಹೊಂದಿದ ಚಾಕ್ಲೇಟ್ ಇದಾಗಿದ್ದು ಕೊರೊನಾ ಲಾಕ್ ಡೌನ್ ನಿಂದ ಈ ಕಂಪನಿಯ ಚಾಕ್ಲೇಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಈ ಕಾರಣದಿಂದ ಇದರ ಅವಧಿ ಮುಗಿದಿದ್ದು, ಕಂಪನಿಯ ಡೀಲರ್ ನಗರಸಭೆಯ ಕಸ ವಿಲೇವಾರಿಗೆ ನೀಡದೆ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಯಾ ಮಿರ್ಜಾ
Advertisement
Advertisement
ಹೀಗೆ ಎಸೆದ ಚಾಕ್ಲೇಟ್ ಅನ್ನು ದನಗಳು ತಿಂದಿವೆ. ಅಲ್ಲದೆ ಮಕ್ಕಳು ಕೂಡ ಎತ್ತಿಕೊಂಡು ಹೋಗಿದ್ದಾರೆ. ರಾಶಿಗಟ್ಟಲೆ ಈ ಚಾಕ್ಲೇಟ್ ಗಳು ರಸ್ತೆ ಪಕ್ಕದಲ್ಲಿ ಬಿದ್ದಿದ್ದು ಪಕ್ಕದಲ್ಲೇ ಕೆರೆ ಸಹ ಇರುವುದರಿಂದ ಮಳೆಯಲ್ಲಿ ಈ ನೀರಿಗೆ ಸೇರಿ ಮಲೀನವಾಗಲಿದೆ. ಹೀಗಾಗಿ ಸ್ಥಳೀಯ ಜನರು ಈ ಚಾಕ್ಲೇಟ್ ಕಂಪನಿ ಡೀಲರ್ ವಿರುದ್ಧ ನಗರಸಭೆಗೆ ದೂರು ಸಹ ನೀಡಿದ್ದಾರೆ. ಇದನ್ನೂ ಓದಿ: ಬಾನೆಟ್ ಮೇಲೆ ಕುಳಿತು ಮೆರವಣಿಗೆ – ವಧುವಿಗೆ ದಂಡ