– ಪತ್ನಿ, ಸ್ಥಳೀಯರಿಂದ ಮುತ್ತಿಗೆ
ಚಿಕ್ಕಮಗಳೂರು: ಉಪವಲಯ ಅರಣ್ಯಾಧಿಕಾರಿ ವಸತಿ ನಿಲಯಕ್ಕೆ ಮಹಿಳೆಯನ್ನ ಕರೆಸಿಕೊಂಡು ಪತ್ನಿಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಬಲ್ ನಲ್ಲಿ ನಡೆದಿದೆ.
ಚಂದನ್ ಸಿಕ್ಕಿಬಿದ್ದ ಕೊಪ್ಪ ವಿಭಾಗದ ಉಪವಲಯ ಅರಣ್ಯಧಿಕಾರಿ. ಚಂದನ್ ಸರ್ಕಾರಿ ಕ್ವಾರ್ಟರ್ಸ್ ಗೆ ಮಹಿಳೆಯನ್ನ ಕರೆಸಿಕೊಂಡಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ಚಂದನ್ ಪತ್ನಿ ಮತ್ತು ಗ್ರಾಮಸ್ಥರು ಕ್ವಾರ್ಟರ್ಸ್ ಗೆ ಮುತ್ತಿಗೆ ಹಾಕಿ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರಿ ಕ್ವಾರ್ಟರ್ಸ್ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಬಾಳೂರು ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.