ಬೆಂಗಳೂರು: ಕ್ವಾರಂಟೈನ್ ಆಗುವುದನ್ನು ತಪ್ಪಿಸಿಕೊಂಡು ಹೋದ ಪ್ರಯಾಣಿಕರನ್ನು ಹುಡುಕಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂಬೈನಿಂದ ಬಂವದರಿಗೆ ಖಡಕ್ ಎಚ್ಚರಿಕೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಭಾಸ್ಕರ್ ರಾವ್, ಬೆಳಗ್ಗೆ ಮುಂಬೈಯಿಂದ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ 667 ಪ್ರಯಾಣಿಕರು ಬಂದಿದ್ದಾರೆ. ಮುಂಬೈಯಿಂದ ಬಂದವರನ್ನ ಕ್ವಾರಂಟೈನ್ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಕ್ವಾರಂಟೈನ್ ತಪ್ಪಿಸಿಕೊಳ್ಳಲು ಬಹಳ ಜನರು ಓಡಿಹೋಗಿದ್ದಾರೆ. ಆದರೆ ಅವರ ಬೆನ್ನತ್ತಿ ಹೋಗುವುದು ಸರಿಯಲ್ಲ ಎಂದು ನಾವು ಹೋಗಿಲ್ಲ ಎಂದು ತಿಳಿಸಿದರು.
Advertisement
Advertisement
ರೈಲ್ವೆ ಇಲಾಖೆಯಿಂದ ಅವರ ವಿಳಾಸ ತೆಗೆದುಕೊಂಡು ಅವರನ್ನು ಪತ್ತೆ ಮಾಡುತ್ತೇವೆ. ನಂತರ ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುತ್ತೇವೆ. ಪ್ರಯಾಣಿಕರು ಅವರಾಗಿ ಬಂದು ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಬೇಕು. ಒಂದು ವೇಳೆ ಅವರು ಆರೋಗ್ಯ ಅಧಿಕಾರಿಗಳನ್ನು ಸಂಪರ್ಕ ಮಾಡದೆ ಹೋದರೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಸೂಚಿಸಿದರು.
Advertisement
Advertisement
ಪಾಲಿಕೆ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಮುಂಬೈಯಿಂದ ಬಂದ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ. ಆಗ ಪ್ರಯಾಣಿಕರು ಕ್ವಾರಂಟೈನ್ ಆಗಲು ವಿರೋಧಿಸಿ ಗಲಾಟೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ತಪ್ಪಿಸಿಕೊಂಡು ಹೋಗಿರುವವರು ಪ್ಯಾಸೆಂಜರ್ಸ್ ತಕ್ಷಣ ಪಾಲಿಕೆ ಆರೋಗ್ಯ ಅಧಿಕಾರಿಗಳನ್ನ ಸಂಪರ್ಕ ಮಾಡಿದರೆ ಕ್ರಿಮಿನಲ್ ಕೇಸ್‍ನಿಂದ ಮುಕ್ತಿ ಸಿಗುತ್ತದೆ. ಇಲ್ಲದೇ ಹೋದರೆ ರೈಲ್ವೇ ಇಲಾಖೆಯಿಂದ ಮಾಹಿತಿ ಪಡೆದು ತಪ್ಪಿಸಿಕೊಂಡು ಹೋದ ಪ್ರಯಾಣಿಕರನ್ನು ಹುಡುಕಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತೆ ಎಂದು ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದರು.