– ಯುವಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಚಿಕ್ಕಮಗಳೂರು: ಚಾರ್ಮಾಡಿ ಘಾಟ್‍ನಲ್ಲಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಮುಖ ದಾಖಲೆ ಪತ್ರಗಳು ಹಾರಿ ಹೋಗಿದ್ದು, ಇವುಗಳನ್ನು ಸ್ಥಳೀಯ ಸ್ನೇಕ್ ಆರೀಫ್ ಎಂಬವರು ಮಾಲೀಕರಿಗೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮಗುಚಿ ಬಿದ್ದಿತ್ತು. ಪರಿಣಾಮ ಕಾರಿನಲ್ಲಿದ್ದ ಐವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ಅಮೂಲ್ಯ ದಾಖಲೆಗಳು ಹಾರಿ ಹೋಗಿದ್ದವು.
Advertisement
Advertisement
ಆ ದಾಖಲೆಗಳು ತುಂಬಾ ಮುಖ್ಯವಾಗಿರೋದು ಎಂದು ಕಾರಿನಲ್ಲಿದ್ದವರು ಗೋಗರೆದಾಗ ಚಾರ್ಮಾಡಿಯ ಆಪತ್ಫಾಂದವ ಎಂದೇ ಕರೆಸಿಕೊಳ್ಳುವ ಸ್ಥಳೀಯ ಸ್ನೇಕ್ ಆರೀಫ್, ಜೀವದ ಹಂಗು ತೊರೆದು ಕ್ರೇನ್ ಮೂಲಕ ನೇತಾಡಿಕೊಂಡು ಚಾರ್ಮಾಡಿಯ ಘಾಟಿಯ ಪ್ರಪಾತಕ್ಕೆ ಇಳಿದಿದ್ದಾರೆ. ಅಲ್ಲದೆ ಅಲ್ಲಿದ್ದ ದಾಖಲೆ ಪತ್ರಗಳನ್ನ ತಂದು ಕಾರಿನಲ್ಲಿದ್ದ ವ್ಯಕ್ತಿಗೆ ಹಿಂದಿರುಗಿಸಿ ಸಾಹಸ ಮೆರೆದಿದ್ದಾರೆ.
Advertisement
ಆರೀಫ್ ಅವರ ಸಾಹಸಿ ಪ್ರವೃತ್ತಿಗೆ ಕಾರಿನಲ್ಲಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ದಾಖಲೆಗಳನ್ನ ಹುಡುಕಲು ಸ್ನೇಕ್ ಆರೀಫ್ ತೆಗೆದುಕೊಂಡ ರಿಸ್ಕ್ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಇಂತಹ ರಿಸ್ಕ್ ಬೇಕಿತ್ತಾ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಆರೀಫ್ ಜೀವಕ್ಕೆ ಹೆಚ್ಚು-ಕಮ್ಮಿಯಾಗಿದ್ರೆ ಜವಾಬ್ದಾರಿ ಯಾರು ಎಂಬ ಪರವಿರೋಧದ ಮಾತುಗಳು ಕೇಳಿ ಬಂದಿವೆ.
Advertisement
ಆದರೆ ಕಾರಿನಿಂದ ಬಿದ್ದವರು ಯಾರೋ, ಡಾಕ್ಯುಮೆಂಟ್ ಕಳೆದು ಹೋಗಿದ್ದು ಯಾರದ್ದೋ. ಆದ್ರೆ ಅಪಘಾತವಾಗಿ ಎಲ್ಲರೂ ಗಾಬರಿಯಾಗಿದ್ದಾಗ ಅಮೂಲ್ಯವಾದ ದಾಖಲೆಗಳನ್ನ ಹುಡುಕೋದು ಚಾರ್ಮಾಡಿಯಂತಹ ಪ್ರಪಾತದ ಜಾಗದಲ್ಲಿ ಕಷ್ಟಸಾಧ್ಯವಲ್ಲ. ಕಷ್ಟವೇ ಸರಿ. ಆದರೆ ಜೀವದ ಹಂಗು ತೊರೆದು ದಾಖಲೆ ತಂದು ಕೊಟ್ಟ ಸ್ನೇಕ್ ಆರೀಫ್ ಸಾಹಸಕ್ಕೆ ಮೆಚ್ಚಲೇಬೇಕು.