ಕ್ರೇಜಿ ಕ್ವೀನ್ ಬರ್ತ್ ಡೇಗೆ ಸ್ಯಾಂಡಲ್‍ವುಡ್ ಕ್ವೀನ್ ವಿಶ್

Public TV
2 Min Read
Ramya Rakshita

– ನೀವಿಲ್ಲದೇ ನನ್ನ ಸಿನಿ ಜರ್ನಿ ಅಪೂರ್ಣ

ಬೆಂಗಳೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್‍ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ವಿಶೇಷ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

Rakshirta

ರಕ್ಷಿತಾಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಇಲ್ಲದೇ ನನ್ನ ಸಿನಿಮಾ ಪ್ರಯಾಣ ಅಪೂರ್ಣ. ಆ ದಿನಗಳೇ ತುಂಬಾ ಸುಂದರ. ಇಂದು ಮತ್ತು ಯಾವಾಗಲೂ ಎಲ್ಲರ ಪ್ರೀತಿಗೆ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ. ಈ ದಿನ ಮತ್ತಷ್ಟು ಸುಂದರವಾಗಿರಲಿ ಎಂದು ಹಾರೈಸಿದ್ದಾರೆ. ಇಬ್ಬರು ಜೊತೆಯಾಗಿ ಕುಳಿತು ಕ್ಲಿಕ್ಕಿಸಿಕೊಂಡಿರುವ ಹಳೆಯ ಫೋಟೋವನ್ನ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ.

Rakshita

ರಕ್ಷಿತಾ ಮತ್ತು ರಮ್ಯಾ ಒಂದೇ ಕಾಲದಲ್ಲಿ ಗಾಂಧಿನಗರಕ್ಕೆ ಕಾಲಿಟ್ಟ ಅಪ್ಸರೆಯರು. ಇನ್ನು ವಿಶೇಷ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಗೆ ಜೊತೆಯಾಗಿ ರಮ್ಯಾ ಮತ್ತು ರಕ್ಷಿತಾ ತಮ್ಮ ಸಿನಿ ಜರ್ನಿಯನ್ನ ಆರಂಭಿಸಿದ್ದರು. ಅಪ್ಪುಗೆ ನಾಯಕಿಯಾಗಿ ರಕ್ಷಿತಾ ಮತ್ತು ಆಕಾಶ್ ಗೆ ನಾಯಕಿಯಾಗಿ ರಮ್ಯಾ ಬಣ್ಣದ ಲೋಕದ ಪಯಣಕ್ಕೆ ಮುನ್ನುಡಿ ಬರೆದಿದ್ದರು. ರಕ್ಷಿತಾ ಮತ್ತು ರಮ್ಯಾ ದೊಡ್ಮನೆಯ ಆಲದ ಮರ ಪಾರ್ವತಮ್ಮ ರಾಜ್‍ಕುಮಾರ್ ಚಂದನವನಕ್ಕೆ ಪರಿಚಯಿಸಿದ ನಟಿಯರು.

ramya aaa

ನಿರ್ದೇಶಕ ಜೋಗಿ ಪ್ರೇಮ್ ಜೊತೆ ಮದ್ವೆ ಬಂಧನದಲ್ಲಿ ಬಂಧಿಯಾದ ರಕ್ಷಿತಾ, ತೆರೆಯ ಹಿಂದೆ ಸರಿದರು. ಸಿನಿಮಾ ನಿರ್ಮಾಣ ಜೊತೆಯಲ್ಲಿ ಖಾಸಗಿ ವಾಹಿನಿಗಳ ರಿಯಾಲಿಟಿ ಶೋಗಳ ಜಡ್ಜ್ ಆಗಿ ರಕ್ಷಿತಾ ಪ್ರೇಮ್ ಬ್ಯುಸಿಯಾಗಿದ್ದಾರೆ. ದಶಕಗಳ ಕಾಲ ಚಂದನವನದ ಬಹುಬೇಡಿಕೆಯ ನಟಿಯಾದ ರಮ್ಯಾ ರಾಜಕಾರಣದಲ್ಲಿ ಸಕ್ರಿಯರಾದ ಬಳಿಕ ಸಿನಿಮಾಗೆ ಬೈ ಹೇಳಿದ್ದಾರೆ.

Happy Happy Birthdayyyy @rakshitha__official My journey in films is incomplete without you! It was full of fun and so…

Posted by Divya Spandana/Ramya on Tuesday, 30 March 2021

ಲೋಕಸಭೆ ಚುನಾವಣೆ ಬಳಿಕ ರಮ್ಯಾ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣದಿಂದಲೂ ದೂರವಾಗಿದ್ದ ಚಂದನವನದ ಪದ್ಮಾವತಿ ಕೆಲ ತಿಂಗಳ ಹಿಂದೆ ವಾಪಸ್ ಆಗಿದ್ದಾರೆ. ಆದ್ರೆ ಇಂದಿಗೂ ಹಲವು ನಿರ್ದೇಶಕರು ರಮ್ಯಾ ಅವರ ಡೇಟ್ ಗಾಗಿ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *