ನವದೆಹಲಿ: ಪ್ರೊ ಕಬಡ್ಡಿ ಆಯೋಜಕರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 2021ರ ಆವೃತ್ತಿಯ ಪ್ರೊ ಕಬಡ್ಡಿ ಜುಲೈನಿಂದ ಪ್ರಾಂಭವಾಗಲಿದೆ.
ಕ್ರಿಕೆಟ್ ನಂತರ ಅತಿಹೆಚ್ಚು ಕ್ರೇಜ್ ಹುಟ್ಟುಹಾಕಿರುವ ದೇಸಿ ಕ್ರೀಡೆಯೆಂದರೆ ಕಬಡ್ಡಿ. ಕಳೆದ ಕೆಲವು ವರ್ಷಗಳಿಂದ ಹೊಸ ಅಲೆಯನ್ನೆ ಸೃಷ್ಟಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಮನೆಮಂದಿಯೆ ಕುಳಿತು ನೋಡುವಷ್ಟು ಕ್ರೇಜ್ ಹುಟ್ಟುಹಾಕಿದೆ.
Advertisement
Advertisement
ಕಳೆದ ವರ್ಷ ಕೊರೊನಾ ಇರುವುದರಿಂದಾಗಿ ಟೂರ್ನಿಯನ್ನು ರದ್ದು ಪಡಿಸಲಾಗಿತ್ತು. ಪ್ರೊ ಕಬಡ್ಡಿಯ ಹಲವು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಇದೀಗ ಕಬಡ್ಡಿ ಆಯೋಜಕರು ಕಬಡ್ಡಿ ಪ್ರಾರಂಭವಾಗಲಿದೆ ಎಂದು ಗುಡ್ ನ್ಯೂಸ್ ನೀಡಿದ್ದಾರೆ.
Advertisement
Advertisement
2021ರ ಆವೃತ್ತಿಯ ಪ್ರೊ ಕಬಡ್ಡಿ ಜುಲೈನಿಂದ ಪ್ರಾರಂಭವಾಗಿ ಅಕ್ಟೋಬರ್‌ವರೆಗೂ ನಡೆಸಲು ಯೋಜನೆಯನ್ನು ರೂಪಿಸಲಾಗಿದೆ. ಕಬಡ್ಡಿಗೆ ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್ ಕಾರಣದಿಂದಾಗಿ ಟೂರ್ನಿ ರದ್ದಾಗಿತ್ತು. ಬಹುತೇಕ ಕ್ರೀಡೆಗಳು ಬಯೋ ಸೆಕ್ಯೂರ್ ವಾತಾವರಣದಲ್ಲಿ ನಡೆಯುತ್ತಿದೆ. ಇದೇ ವ್ಯವಸ್ಥೆಯೊಂದಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತದೆ ಎಂದು ಪ್ರೋ ಕಬಡ್ಡಿ ಆಯೋಜಕ ಸಂಸ್ಥೆಯ ಮಶಾಲ್ ಸ್ಪೋಟ್ರ್ಸ್ ಮೂಖ್ಯಸ್ಥ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.
ಪಿಕೆಎಲ್ ಟೂರ್ನಿ ನವೀನ್ ಕುಮಾರ್, ನಿತೀಶ್ ಕುಮಾರ್ ಅವರಂತಹ ದೇಶಿ ಪ್ರತಿಭೆಗಳನ್ನು ಅನಾವರಣ ಮಾಡಿದೆ. ಮುಂದೆಯೂ ಪಿಕೆಎಲ್ ವತಿಯಿಂದ ದೇಸಿ ಪ್ರತಿಭಾ ಶೋಧ ನಡೆಯಲಿದೆ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿ ರೋಚಕತೆಯನ್ನು ಕಾಯ್ದುಕೊಳ್ಳಲಿದೆ. ಮತ್ತಷ್ಟು ಜಿದ್ದಾಜಿದ್ದಿಯಿಂದ ಇರಲಿದೆ. ಪ್ರೊ ಕಬಡ್ಡಿ ಟೂರ್ನಿಯ ಪ್ರಸಾರ ಹಕ್ಕು ಹರಾಜು ಏಪ್ರಿಲ್‍ನಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರೋ ಕಬಡ್ಡಿ ಗಾಗಿ ಕಾಯುತ್ತಿರುವ ಕ್ರೀಡಾಭಿಮಾನಿಗಳಿಗೆ ಸಖತ್ ಖುಷಿಯಾಗಿದ್ದಾರೆ. ದೇಶಿ ಆಟವನ್ನು ನೋಡಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.