ಅಹಮದಾಬಾದ್: 14ನೇ ಆವೃತ್ತಿಯ ಐಪಿಎಲ್ನಲ್ಲಿ ಆಟಗಾರರು ಆನ್ ಫೀಲ್ಡ್ ನಲ್ಲಿ ಎಷ್ಟು ಮನರಂಜನೆ ನೀಡುತ್ತಾರೋ ಅಷ್ಟೇ ಆಫ್ ಫೀಲ್ಡ್ ನಲ್ಲೂ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇದೀಗ ಕ್ರಿಸ್ ಗೇಲ್ ಮತ್ತು ಯಜುವೇಂದ್ರ ಚಹಲ್ ಮೈದಾನದಲ್ಲಿ ಕ್ರಿಕೆಟ್ ಬಿಟ್ಟು ದೇಹದಾರ್ಢ್ಯ ಸ್ಪರ್ಧೆಗಿಳಿದಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಕ್ರಿಸ್ ಗೇಲ್ ಸದಾ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆರ್ಸಿಬಿ ತಂಡದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಜೊತೆ ಮೈದಾನದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಗಿಳಿಯುವ ಮೂಲಕ ಸುದ್ದಿಯಾಗಿದ್ದಾರೆ.
ಗೇಲ್ ಮತ್ತು ಚಹಾಲ್ ಹಲವು ವರ್ಷಗಳ ಕಾಲ ಜೊತೆಯಾಗಿ ಆರ್ಸಿಬಿ ತಂಡದ ಪರ ಆಡುತ್ತಿದ್ದರು. ಈ ವೇಳೆ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿರು. ಆದರೆ ಇದೀಗ ಗೇಲ್ ಆರ್ಸಿಬಿ ತಂಡವನ್ನು ಬಿಟ್ಟು ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದರೂ ಕೂಡ ಆರ್ಸಿಬಿ ಆಟಗಾರ ಚಹಾಲ್ ಜೊತೆ ಆ ಸ್ನೇಹವನ್ನು ಹಾಗೆ ಉಳಿಸಿಕೊಂಡಿದ್ದಾರೆ. ಹಾಗಾಗಿ ತಮಾಷೆಗಾಗಿ ಆರ್ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ಬಳಿಕ ಬಾಡಿ ಬಿಲ್ಡಿಂಗ್ ಮಾಡಿದ್ದಾರೆ. ಇದರಲ್ಲೂ ಕೂಡ ಗೇಲ್ ಅವರ ದೈತ್ಯ ದೇಹದ ಮುಂದೆ ಚಹಲ್ ಮೋಡಿ ಮಾಡಲಾಗದೇ ಸೋತಿದ್ದಾರೆ.
View this post on Instagram
ಈ ಮೊದಲು ಪಂಜಾಬ್ ಹಾಗೂ ಆರ್ಸಿಬಿ ನಡುವಿನ ಪಂದ್ಯದಲ್ಲಿ ಚಹಲ್ ಅವರ ಓವರ್ ನಲ್ಲಿ ಗೇಲ್ ಎರಡು ಭರ್ಜರಿ ಸಿಕ್ಸರ್ ಹೊಡೆದು ಮೈದಾನದಲ್ಲೇ ಚಹಾಲ್ಗೆ ಚಮಕ್ ಕೊಟ್ಟಿದ್ದರು. ಪಂದ್ಯ ಮುಗಿದ ಬಳಿಕ ಚಹಾಲ್ ಗೇಲ್ಗೆ ಬಾಡಿ ಬಿಡ್ಡಿಂಗ್ನಲ್ಲಿ ಚಮಕ್ ನೀಡಲು ಹೋದಂತೆ ಪೋಸ್ ನೀಡಿದ್ದಾರೆ.
ಗೇಲ್ ತನ್ನ 41ನೇ ವಯಸ್ಸಿನಲ್ಲೂ ಕೂಡ ದೇಹವನ್ನು ದಷ್ಟಪುಷ್ಟವಾಗಿ ಬೆಳೆಸಿಕೊಂಡು ಫಿಟ್ ಆಗಿ ಕಾಣುತ್ತಿದ್ದರೆ. ಚಹಲ್ ಸಣ್ಣಗಿನ ಮೈಕಟ್ಟನ್ನು ಹೊಂದಿ ಸ್ಪಿನ್ ಜಾದೂ ಮಾಡುತ್ತಿದ್ದಾರೆ.