ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

Public TV
2 Min Read
christmas Bangalore

ಬೆಂಗಳೂರು: ಕೋವಿಡ್ ಕಾರಣದಿಂದ ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ಇರಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಇದೀಗ ಕ್ರಿಸ್‍ಮಸ್ ಹಬ್ಬಕ್ಕೂ ಅನ್ವಯವಾಗುವಂತೆ ಕಠಿಣ ನಿಯಮಗಳನ್ನು ಸರ್ಕಾರ ಜಾರಿ ಮಾಡಲು ಮುಂದಾಗಿದೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆ ಸಂಬಂಧ ಕೇಂದ್ರ ಸರ್ಕಾರದ ಆದೇಶದ ಅನ್ವಯ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

christmas tree 2 e1576731394392

ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಕ್ರಿಸ್‍ಮಸ್ ಹಬ್ಬವನ್ನು ಭಕ್ತಿಪೂರ್ವಕವಾಗಿ, ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಕರೆ ನೀಡಿದೆ. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಜನ ಸೇರುವ ಪ್ರದೇಶಗಳಲ್ಲಿ ಹಲವು ನಿರ್ಬಂಧಗಳನ್ನು ಸರ್ಕಾರ ಹೇರಿದೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಡಿಸೆಂಬರ್ 20ರಿಂದಲೇ ಅಂದ್ರೆ ಮುಂದಿನ ಭಾನುವಾರದಿಂದಲೇ ಜಾರಿಗೆ ಬರಲಿವೆ. ಜನವರಿ 2ರವರೆಗೆ ಈ ಮಾರ್ಗಸೂಚಿ ಜಾರಿಯಲ್ಲಿ ಇರುತ್ತದೆ.

christmas 3 1

ಕೋವಿಡ್ ರೂಲ್ಸ್ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಂತೆ ಆಗಿದೆ. ಪಬ್, ಕ್ಲಬ್ ಬೇಡ ಅಂದ್ಕೊಂಡು ಬೆಂಗಳೂರಿನ ಹೊರವಲಯದ ಹೋಟೆಲ್, ರೆಸಾರ್ಟ್ ಗಳಲ್ಲಿ ಪಾರ್ಟಿ ಆಯೋಜಿಸಲು ಮುಂದಾಗಿದ್ದವರಿಗೂ ಹೊಸ ಮಾರ್ಗಸೂಚಿ ತಣ್ಣೀರು ಎರಚಿದೆ. ಕೆಲ ಆಯೋಜಕರಂತೂ, ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್ ಕೊಟ್ಟಿದ್ದರು. ಟ್ರೆಕ್ಕಿಂಗ್, ಫೈರ್ ಕ್ಯಾಂಪ್, ಡಿಜೆ ಪಾರ್ಟಿ, ಓಪನ್ ಪಾರ್ಟಿಗಳಿಗೆ ಬುಕ್ಕಿಂಗ್ ಕೂಡ ಶುರುವಾಗಿತ್ತು.

New Year 1 1

ಕ್ರಿಸ್‍ಮಸ್, ಹೊಸ ವರ್ಷಕ್ಕೆ ಮಾರ್ಗಸೂಚಿ
* ಕ್ರಿಸ್‍ಮಸ್ ಆಚರಣೆ ವೇಳೆ ಹಸ್ತಲಾಘವ, ಆಲಿಂಗನ ನಿಷಿದ್ಧ.
* ಚರ್ಚ್‍ಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ ಕೈಗೊಳ್ಳಬೇಕು (ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಯೋಜಕರು ಕ್ರಮ ತೆಗೆದುಕೊಳ್ಳಬೇಕು)
* ಕ್ಲಬ್,ಪಬ್,ರೆಸ್ಟೋರೆಂಟ್‍ಗಳಲ್ಲಿ ಡಿಜೆ, ಡ್ಯಾನ್ಸ್, ಪಾರ್ಟಿ ನಿಷೇಧ.

New Year 2

* ಪ್ರತಿನಿತ್ಯದಂತೆ ಕ್ಲಬ್,ಪಬ್,ರೆಸ್ಟೋರೆಂಟ್ ನಡೆಸಲು ಅಡ್ಡಿ ಇಲ್ಲ.(ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಕಡ್ಡಾಯ)
* ಹೋಟೆಲ್, ಮಾಲ್, ಪಬ್‍ಗಳು ಟೋಕನ್ ಪದ್ದತಿ, ಬುಕಿಂಗ್ ಅಳವಡಿಸಿಕೊಳ್ಳಬೇಕು (ಜನರು ಒಮ್ಮೆಯೇ ಬರುವುದನ್ನು ತಡೆಯಲು)
* ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಜನರ ಸೇರುವಿಕೆ, ಸಂಭ್ರಮಾಚರಣೆ ನಿಷೇಧ.

New Year 3

* ಡಿಸಿ, ಎಸ್‍ಪಿಗಳಿಗೆ ಆಯ್ದ ರಸ್ತೆಗಳಲ್ಲಿ ನಿರ್ಬಂಧ ವಿಧಿಸುವ ಅಧಿಕಾರ.
* ಹಿರಿಯ ನಾಗರಿಕರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಇರಬೇಕು.
* ಅಪಾರ್ಟ್‍ಮೆಂಟ್, ಹೋಟೆಲ್, ಹಾಲ್‍ಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ.
* ಹಸಿರು ಪಟಾಕಿ ಹೊಡೆಯಬಹುದು.

Share This Article
Leave a Comment

Leave a Reply

Your email address will not be published. Required fields are marked *